Belagavi News In Kannada | News Belgaum

ದೇವರಾಣೆ ಬಿಟ್ ಕಾಯಿನ್ ಅಂದ್ರೇನು ಗೊತ್ತಿಲ್ಲ : ಮಾಜಿ ಸಚಿವ ರಮೇಶ್ ಜಾರಕಿಹೊಳಿ

🌐 Belgaum News :

ಬೆಳಗಾವಿ : ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ರಾಜು ಕಾಗೆ ಅವರ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ದಿಢೀರ್ ಭೇಟಿ ನೀಡಿದ್ದು, ಜಿಲ್ಲೆಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಾಗವಾಡ ತಾಲೂಕಿನ ಶಿರಗುಪ್ಪಿ, ಉಗಾರ ಹಾಗೂ ಉಗಾರ ಬಿ.ಕೆ ಗ್ರಾಮಗಳಿಗೆ ರಮೇಶ್‌ ಜಾರಕಿಹೊಳಿ ಭೇಟಿ ನೀಡುವುದರ ಜೊತೆಗೆ ಮಾಜಿ ಶಾಸಕ‌ ಹಾಗೂ ಕಾಂಗ್ರೆಸ್ ನಾಯಕ ರಾಜು ಕಾಗೆ ಮನೆಗೆ ಭೇಟಿ ನೀಡಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ‌ ಗುಪ್ತ ಚರ್ಚೆ ನಡೆಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ರಾಜು ಕಾಗೆ ನನ್ನ ಹಳೆಯ ಸ್ನೇಹಿತರು. ಅವರನ್ನುಅನಾರೋಗ್ಯದ ಸಂದರ್ಭದಲ್ಲಿ ಭೇಟಿಯಾಗಿರಲು ಆಗಿರಲಿಲ್ಲ. ಈಗ ಉಗಾರ ಮಾರ್ಗವಾಗಿ ಅಥಣಿಗೆ ತೆರಳುವ ವೇಳೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ವಿಚಾರಿಸಿದ್ದೇನೆ ಎಂದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ರಾಜು ಕಾಗೆಯವರು ಅವರ ಪಕ್ಷದ ಪರ ಪ್ರಚಾರ ಕೈಗೊಳ್ಳುತ್ತಾರೆ. ನಾನು ನಮ್ಮ ಪಕ್ಷದ ಪರ ಪ್ರಚಾರ ಕೈಗೊಳ್ಳುತ್ತೇನೆ. ಇದರಲ್ಲಿ ಯಾವುದೇ ರೀತಿ ರಾಜಕೀಯ ಬೆರೆಸುವುದು ಬೇಡ ಎಂದು ಹೇಳಿದರು.

ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಬಿಜೆಪಿಯಿಂದ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ಬೇಡಿಕೆ ಇಟ್ಟಿಲ್ಲ. ನಮ್ಮ ಪಕ್ಷದಿಂದ ಮಹಾಂತೇಶ್ ಕವಟಗಿಮಠ ಹೆಸರು ಪೈನಲ್ ಆಗಿದೆ. ಅವರ ಪರ ಭರ್ಜರಿ ಪ್ರಚಾರ ನಡೆಸಿದ್ದೇವೆ. ಖಾನಾಪುರ, ಬೆಳಗಾವಿ, ಅಥಣಿಯಲ್ಲಿ ಮುಖಂಡರನ್ನು ಭೇಟಿ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಬಿಟ್ ಕಾಯಿನ್ ಕುರಿತು ನಿರಂತರ ಟ್ವಿಟ್ ವಿಚಾರವಾಗಿ ಮಾಧ್ಯಮದವರು ಹೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಿಜ ಹೇಳಬೇಕು ಅಂದ್ರೆ ರಾಜಕೀಯ ಭಾಷೆಯಲ್ಲಿ ಹೇಳುವುದಾದ್ರೆ  ದೇವರಾಣೆ ಬಿಟ್ ಕಾಯಿನ್ ಅಂದ್ರೆ ಏನು ಅಂತಾ ಗೊತ್ತಿಲ್ಲ.ಅದರ ಬಗ್ಗೆ ಅಧ್ಯಯ ಮಾಡಿ ಬಳಿಕ ಬಿಟ್ ಕಾಯಿನ್ ಕುರಿತು ಮಾತನಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕಾಗವಾಡ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಬೋರಗಾಂವದ ಅಭಿನಂದನ ಪಾಟೀಲ, ಉತ್ತಮ ಪಾಟೀಲ ಇತರರು ಇದ್ದರು.///////

📱 Read Top News, Belgaum News Updates, Belagavi News in Kannada, Latest News on News Belgaum