Belagavi News In Kannada | News Belgaum

ಬೆಳ್ಳಂಬೆಳಗ್ಗೆ ವಸೂಲಿಗಿಳಿದು ತಗಲಾಕ್ಕೊಂಡ ಹೊಯ್ಸಳ ಸಿಬ್ಬಂದಿ

🌐 Belgaum News :

ಬೆಂಗಳೂರು: ಬೆಳ್ಳಂಬೆಳಗ್ಗೆ ಹಣ ವಸೂಲಿಗಿಳಿದು ಓರ್ವ ಪೊಲೀಸ್ ತಗಲಾಕ್ಕೊಂಡಿದ್ದಾರೆ. ಅಂಗಡಿ ಮಾಲೀಕರಿಂದ ಪೊಲೀಸರು ಹಣ ವಸೂಲಿ ಮಾಡಿದ್ದರು. ಆದರೆ ಯುವಕನೊಬ್ಬ ಹೊಯ್ಸಳ ಸಿಬ್ಬಂದಿಯಿಂದ ಹಣವನ್ನು ವಾಪಾಸ್ ಕೊಡಿಸಿದ್ದಾನೆ.

ಅಂಗಡಿ ಮಾಲೀಕರಿಂದ ಪೊಲೀಸ್ ಹಣ ಪಡೆಯುವ ದೃಶ್ಯವನ್ನು ಯುವಕ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ. ಮಹಿಳೆ ಹೊಯ್ಸಳ ಸಿಬ್ಬಂದಿಗೆ ಹಣ ನೀಡಿದ್ದಾರೆ. ಹಣ ನೀಡಿ ವಾಪಾಸ್ ಹೋಗುತ್ತಿದ್ದಂತೆ ಪೊಲೀಸ್ ಬಳಿ ಯುವಕ ಹೋಗಿ ಸರ್ ಸರ್ ಎಂದು ಕರೆದು ಏನ್ ತೆಗೆದುಕೊಂಡಿದ್ದೀರಿ ಅಂತ ಕೇಳಿದ್ದಾನೆ. ನಂತರ ತೆಗೆದುಕೊಂಡ ಹಣ ವಾಪಾಸ್ ಕೊಡಿ ಅಂತ ಯುವಕ ಕೇಳಿದ್ದಾನೆ. ಯುವಕ ಹೇಳುತ್ತಿದ್ದಂತೆ ವಸೂಲಿ ಮಾಡಿದ್ದ ಹಣವನ್ನು ಪೊಲೀಸ್ ವಾಪಸ್ ನೀಡಿದ್ದಾರೆ.

ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ./////

📱 Read Top News, Belgaum News Updates, Belagavi News in Kannada, Latest News on News Belgaum