Belagavi News In Kannada | News Belgaum

ಸಕ್ತ ಸಾಲಿನಲ್ಲಿ 74 ಲಕ್ಷ 97 ಸಾವಿರ 446 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ಭಮ್ಮಣ್ಣಾ ಜಿನ್ನಪ್ಪಾ ಚೌಗಲೆ

🌐 Belgaum News :

ಶೇಡಬಾಳ : ಸಮೀಪದ ಶಿರಗುಪ್ಪಿ ಗ್ರಾಮದ ಜಿನ್ನಪ್ಪ ಚೌಗಲೆ ಲಾಲಬಹದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ 74 ಲಕ್ಷ 97 ಸಾವಿರ 446 ರೂ. ನಿವ್ವಳ ಲಾಭ ಗಳಿಸಿದೆ ಎಂದು ಸೊಸಾಯಿಟಿಯ ಅಧ್ಯಕ್ಷ ಭಮ್ಮಣ್ಣಾ ಜಿನ್ನಪ್ಪಾ ಚೌಗಲೆ ಹೇಳಿದರು.

ರವಿವಾರ ದಿ. 14 ರಂದು ಶಿರಗುಪ್ಪಿ ಅರಿಹಂತ ಶಿಕ್ಷಣ ಸಮಿತಿ ಸಭಾಂಗಣದಲ್ಲಿ ಜರುಗಿದ 32 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ 1993 ಸದಸ್ಯರನ್ನು ಹೊಂದಿರುವ ಸಂಸ್ಥೆಯು 11 ಲಕ್ಷ 39 ಸಾವಿರ ರೂ. ಶೇರು ಬಂಡವಾಳ ಹೊಂದಿದೆ. ಇಲ್ಲಿಯವರೆಗೆ 48 ಕೋಟಿ 96 ಲಕ್ಷ 16 ಸಾವಿರ 523 ರೂ. ಠೇವು ಸಂಗ್ರಹಿಸಿದ್ದು, ಸುಮಾರು 18 ಕೋಟಿ 78 ಲಕ್ಷ 53 ಸಾವಿರ 185 ರೂ. ಸಾಲ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 74 ಲಕ್ಷ 97 ಸಾವಿರ 446 ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ. 25 ರಷ್ಟು ಲಾಭಾಂಶ ಹಂಚಲಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದು ವಿವರಿಸಿದರು.

ಈಗಾಗಲೇ ಅಥಣಿ, ಮೋಳೆ, ಇಂಗಳಿ, ಐನಾಪೂರ, ಶೇಡಬಾಳದಲ್ಲಿ ಶಾಖೆಗಳನ್ನು ಪ್ರಾರಂಭಿಸಲಾಗಿದ್ದು, 5 ಶಾಖೆಗಳು ಪ್ರಗತಿಪಥದತ್ತ ಸಾಗುತ್ತಿವೆ. ಮುಂದಿನ ದಿನಮಾನಗಳಲ್ಲಿ ಇನ್ನು ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಸಂಘದ ಏಳಿಗೆಗಾಗಿ ಸದಸ್ಯರು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವುದು ಅಭಿನಂದನೀಯ. ಅವರ ಸಹಾಯ ಸಹಕಾರ, ಪ್ರೋತ್ಸಾಹ ಇದೇ ರೀತಿ ಇರಲಿ ಎಂದು ವಿನಂತಿಸಿಕೊಂಡರು.

ಜನರಲ್ ಮ್ಯಾನೇಜರ ಅಜೀತ ನಾಂದಣಿ ವರದಿ ವಾಚನ ಮಾಡುವುದರ ಜತೆಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿ ಮಂಜೂರಾತಿ ಪಡೆದುಕೊಂಡರು.
ಈ ಸಮಯದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಭಮ್ಮಣ್ಣಾ ಜಿನ್ನಪ್ಪ ಚೌಗುಲೆ, ಉಪಾಧ್ಯಕ್ಷರಾದ ಶಂಕರ ಪುಂಡಲಿಕ ಸವದೆ, ಸದಸ್ಯರಾದ ಭಾವುಸಾಬ ಕುರುಂದವಾಡೆ, ಸುರೇಶ ಚೌಗುಲೆ,

ತಾತ್ಯಾಸಾಬ ಚೌಗಲೆ, ವೀಣಾ ಸುಭಾಷ ಕಾತ್ರಾಳೆ, ಮಹಾವೀರ ಅಕಿವಾಟೆ, ಅಪ್ಪಾಸಾಬ ಶಿರಗುಪ್ಪೆ, ಅಣ್ಣಾಸಾಬ ಚಂದೂರೆ, ನೇಮಣ್ಣಾ ತೇರದಾಳೆ, ಭೋಲಾ ರಾಜಾಪೂರೆ, ಯಲ್ಲಪ್ಪ ಕಾಂಬಳೆ, ಮಹಾದೇವಿ ಮಲಗೌಡ ಪಾಟೀಲ, ಶಾಲನ ಸರ್ಜೇರಾವ ಪಾಟೀಲ, ಮೋಳೆಯ ತವನಪ್ಪ ಹೊಂಬಳ್ಳಿ, ಆನಂದ ಅರಗೆ, ಸುನೀಲ ಪಾಟೀಲ, ಮಹಾವೀರ ಮಾಲಗಾಂವೆ ಹಾಗೂ ಬ್ಯಾಂಕಿನ ಜನರಲ್ ಮ್ಯಾನೇಜರರಾದ ಅಜೀತ ನಾಂದಣಿ, ವಿದ್ಯಾಸಾಗರ ಚೌಗಲೆ ಸೇರಿದಂತೆ ಬ್ಯಾಂಕಿನ ಸಿಬ್ಬಂದಿವರ್ಗ, ಸದಸ್ಯರು, ಎಲ್ಲ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ಸದಸ್ಯರು ಇದ್ದರು.

📱 Read Top News, Belgaum News Updates, Belagavi News in Kannada, Latest News on News Belgaum