Belagavi News In Kannada | News Belgaum

ಕೃಷಿ ಮಸೂದೆ ಹಿಂಪಡೆದಿರುವುದು ರೈತರಿಗೆ ದೊರೆತ ಐತಿಹಾಸಿಕ ಜಯ : ಸತೀಶ್ ಜಾರಕಿಹೊಳಿ

🌐 Belgaum News :

ಗೋಕಾಕ : ಸುಮಾರು ಒಂದೂವರೆ ವರ್ಷದಿಂದ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೇಂದ್ರ ಸರ್ಕಾರ ಮಣಿದು, ಕೃಷಿ ಮಸೂದೆಗಳನ್ನು ವಾಪಸ್ ಪಡೆದಿದೆ. ಇದು ರೈತರಿಗೆ ದೊರೆತ ಐತಿಹಾಸಿಕ ಜಯವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಅವರು ಮಾತನಾಡಿ , ಪ್ರಧಾನಿ ನರೇಂದ್ರ ಮೋದಿಯವರು ಕೃಷಿ ಮಸೂದೆಗಳನ್ನು ಹಿಂಪಡೆದಿರುವುದು ಬಹುದೊಡ್ಡ ಆಶ್ಚರ್ಯ ಬೆಳವಣಿಗೆ. ಈ ಹಿಂದೆಯೇ ವಾಪಸ್ ಪಡೆಯಬೇಕಿತ್ತು. ಇದರಿಂದ ಬಿಜೆಪಿಗೂ ಗೌರವ ಸಿಗುತ್ತಿತ್ತು ಎಂದರು.

ಹರಿಯಾಣ , ಪಂಜಾಬ, ಉತ್ತರ ಪ್ರದೇಶದ ರೈತರು ಸುದೀರ್ಘ ಹೋರಾಟ ಮಾಡಿದ್ದಾರೆ. ಹೀಗಾಗಿ ಇದು ಮಣ್ಣಿನ ಮಕ್ಕಳಿಗೆ ಸಿಕ್ಕ ಜಯವಾಗಿದೆ. ಇದರಿಂದ ಬಿಜೆಪಿಯನ್ನು  ಅಭಿನಂದಿಸಲು, ಒಳ್ಳೆಯ ಕೆಲಸವೇನು ಮಾಡಿಲ್ಲ. ಒತ್ತಡಕ್ಕೆ ತಲೆ ಬಾಗಿದ್ದಾರೆ ಎಂದು ತಿಳಿಸಿದರು.

ಕೃಷಿ ಮಸೂದೆಯನ್ನು ವಿರೋಧಿಸಿ  ರೈತರ ನಿರಂತರ ಪ್ರತಿಭಟನೆಗೆ ಮೋದಿಯವರು ತಲೆ ಬಾಗಿಸಿ ಗೌರವ ಕೊಟ್ಟಿದ್ದಾರೆ. ರೈತರೂ ಸಹ ಒಂದೂವರೆ ವರ್ಷದಿಂದ ಹೋರಾಟ ಮಾಡಿದ್ದಾರೆ. ಜನರ ಒತ್ತಡಕ್ಕೆ ಮಣಿದು ಮಸೂದೆ ಹಿಂಡೆದಿದ್ದಾರೆ. ಹೀಗಾಗಿ ಇದು ಜನರ ಐತಿಹಾಸಿಕ ಗೆಲುವು  ಎಂದಿದ್ದಾರೆ.

ಕಾಂಗ್ರೆಸ್ ಪಕ್ಷವೂ ಕೂಡಾ ರೈತರಬೆಂಬಲಕ್ಕೆ ನಿಂತೂ ಹೋರಾಟ ಮಾಡಿದೆ. ಸಾರ್ವಜನಿಕರು, ಬುದ್ದಿ ಜೀವಿಗಳು, ಇತರ ಪಕ್ಷಗಳು ಸಹ ರೈತರಿಗೆ ಬೆಂಬಲಿಸಿದ್ದಾರೆ. ಇವರೆಲ್ಲರಿಗೂ ದೊರೆತ ಗೆಲುವು ಅಂತ ಹೇಳಬಹುದು ಎಂದು ಹೇಳಿದ್ದಾರೆ.////

📱 Read Top News, Belgaum News Updates, Belagavi News in Kannada, Latest News on News Belgaum