Belagavi News In Kannada | News Belgaum

ಚಿತ್ರದುರ್ಗದಲ್ಲಿ ಮಳೆಯ ಅಬ್ಬರ : ಗೋಡೆ ಕುಸಿದು ದಂಪತಿ ಸೇರಿ 6 ಜನರು ಬಲಿ

🌐 Belgaum News :

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಅಕಾಲಿಕ ಮಳೆಗೆ ಮನೆ ಕುಸಿತಕ್ಕೆ ಇದುವರೆಗೂ ಬರೋಬ್ಬರಿ 6 ಜನ ಬಲಿಯಾಗಿದ್ದಾರೆ.

ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಗೋಡೆ ಕುಸಿತಕ್ಕೆ ಗ್ರಾಮದ ತ್ರಿವೇಣಿ (24) ಮೃತಪಟ್ಟ ಬೆನ್ನಲ್ಲೇ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಗೋಡೆ ಕುಸಿದು ದಂಪತಿಗಳು ಸಾವನ್ನಪ್ಪಿದ್ದಾರೆ. ಗ್ರಾಮದ ಕಂಪ್ಲೇಶ(43), ಪತ್ನಿ ತಿಪ್ಪಮ್ಮ(35) ಮೃತ ದುರ್ದೈವಿಗಳು. ಇನ್ನು ಘಟನೆಯಲ್ಲಿ ಪುತ್ರ ಅರುಣ್ ಕುಮಾರ್​ಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ನವೆಂಬರ್​ 14 ರಂದು ಭಾರೀ ಮಳೆಗೆ ಗೋಡೆ ಕುಸಿದು ಹಿರಿಯೂರು ತಾಲೂಕಿನ ಬುರುಜಿನರೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೋ.ಚಿ.ಬೋರಯ್ಯನಹಟ್ಟಿಯಲ್ಲಿ ಮೂವರು ಅಸುನೀಗಿದ್ದರು. ಇದೀಗ ನಾಯಕನಹಟ್ಟಿಯಲ್ಲಿ ಈ ದುರ್ಘಟನೆ ಸಂಭವಿಸಿದೆ./////

📱 Read Top News, Belgaum News Updates, Belagavi News in Kannada, Latest News on News Belgaum