Belagavi News In Kannada | News Belgaum

ಭಾರತಕ್ಕೆ ಭದ್ರ ಬುನಾದಿ ಹಾಕಿದ ಉಕ್ಕಿನ ಮಹಿಳೆ : ಪ್ರಕಾಶ ಹಾದಿಮನಿ

🌐 Belgaum News :

ಶಿಗ್ಗಾಂವ : ತಾಲ್ಲೂಕು ಕ್ಯಾಲಕೊಂಡ ಗ್ರಾಮದಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿ ಉಕ್ಕಿನ ಮಹಿಳೆ ಎಂದು ಖ್ಯಾತಿ ಪಡೆದಿರುವ ದಿವಂಗತ ಮಾಜಿ ಇಂದಿರಾ ಗಾಂಧಿ ಅವರ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.

ಇದೇ ವೇಳೆ ಕೆಪಿಸಿಸಿ ಎಸ್ ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಅಳ್ಳಾವರ ಬ್ಲಾಕ್ ಕೆಪಿಸಿಸಿ ಸಂಯೋಜಕ ಪ್ರಕಾಶ್ ಹಾದಿಮನಿ ಮಾತನಾಡಿ, ಭಾರತ ದೇಶ ಸುಭದ್ರವಾಗಿದೆ ಎಂದರೆ‌ ಅದು ಇಂದಿರಾಗಾಂಧಿ ಅವರು ಹಾಕಿದ  ಕೆಲವು ಭದ್ರ ಬುನಾದಿ ಅಂದರೆ ತಪ್ಪು ಆಗಲಾರದು. ಅವರು ಕೈಗೊಂಡಿರುವಂತಹ ಕೆಲವೊಂದು ನಿರ್ಧಾರಗಳು  ಇಂದು ನಮ್ಮ ದೇಶ ಅಭಿವೃದ್ಧಿಗೆ ಕಾರಣ ಎಂದರು.

ದೇಶದ ದಿನ ದಲಿತರು ಅಲ್ಪಸಂಖ್ಯಾತರು ಹಿಂದುಳಿದವರಿಗೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಈ ಜನರಿಗೆ ಶ್ರಮ ವಹಿಸಿದ್ದಾರೆ. ಇಂದಿನ ಯುವಕರಿಗೆ ಇಂದಿರಾ ಗಾಂಧಿಯವರ ಬಗ್ಗೆ ತಿಳಿಸುವುದು ಅಗತ್ಯವಿದೆ ಎಂದು ಹೇಳಿದರು.

 

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಜಾಫರ್ ಬಾಗವಾನ್, ಬಸುರಾಜ್ ಕಳ್ಳಿಮನಿ, ಸಚಿನ್ ಗೋಣೆಪ್ಪನವರ, ರಾಮು ತಟ್ಟಿಮನಿ, ಪ್ರದೀಪ್ ಕಟ್ಟಿಮನಿ ಮಂಜುನಾಥ್ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum