Belagavi News In Kannada | News Belgaum

ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ : ಬೆಳಗಾವಿಯಲ್ಲಿ ರೈತರಿಂದ ಸಿಹಿ ಹಂಚಿ, ಸಂಭ್ರಮಾಚರಣೆ

🌐 Belgaum News :

ಬೆಳಗಾವಿ: ರೈತ ವಿರೋಧಿ ಮೂರು  ಕೃಷಿ ಕಾಯ್ದೆಯನ್ನು ಕೇಂದ್ರ ವಾಪಸ್ ಪಡೆಯುತ್ತಿದಂತೆ ಬೆಳಗಾವಿಯಲ್ಲಿ ರೈತ ಸಂಘಟನೆಗಳ ಮುಖಂಡರು ಸಂಭ್ರಮಾಚಣೆ ಮಾಡಿದ್ದಾರೆ. ಇದು ಮಣ್ಣಿನ ಮಕ್ಕಳಿಗೆ ಸಿಕ್ಕ ಐತಿಹಾಸಿಕ ಗೆಲುವು ಎಂದು  ಪಟಾಕಿ ಸಿಡಿಸಿ,‌ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಬೆಳಗಾವಿ ರೈತ ಸಂಘಟನೆಗಳು ಜೈ ಘೋಷ ಮೋಳಗಿಸಿದರು.  ಕೇಂದ್ರ ಸರ್ಕಾರ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕೃಷಿ ಕಾಯ್ದೆ ಹಿಂಪಡೆಯುವಂತೆ ನಾಡಿನ ರೈತರು‌ ಹಗಲಿರುಳು  ನಿರಂತರ ಹೋರಾಟ ನಡೆಸಿದ್ದರು. ಈ ಹೋರಾಟದಲ್ಲಿ ರೈತರ ಸಾಕಷ್ಟು-ಸಾವು ನೋವುಗಳಾಗಿರುವ ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಮಸೂದೆಯನ್ನು ಹಿಂಪಡೆದಿರುವುದು ಸಂತಸ ತಂದಿದೆ ಎಂದಿದ್ದಾರೆ.

ಮತ್ತೆ ರೈತ ಮಸೂದೆಗಳನ್ನು ಜಾರಿಗೆ ಮಾಡುವಾಗ ಅದರ ಸಾಧಕ‌ ಬಾಧಕ ಕುರಿತು ಯೋಚನೆ ಮಾಡಬೇಕು. ಅಲ್ಲದೆ, ಕೃಷಿ ಮಸೂದೆಯನ್ನು ಹಿಂಪಡೆಯುವಂತೆ ನಡೆಸಿದ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಕೇಂದ್ರ ಸರಕಾರ‌ ಹೆಚ್ಚಿನ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ರೈತ ಮುಖಂಡರಾದ ಪ್ರಕಾಶ ನಾಯಕ, ಚುನ್ನಪ್ಪ ಪೂಜಾರಿ, ರಾಘವೇಂದ್ರ ನಾಯಕ, ಜಯಶ್ರೀ ಗುರಣ್ಣವರ  ಹಾಗೂ ಇತರರು ಇದ್ದರು./////

📱 Read Top News, Belgaum News Updates, Belagavi News in Kannada, Latest News on News Belgaum