Belagavi News In Kannada | News Belgaum

ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

🌐 Belgaum News :

ಬೆಳಗಾವಿ ಜಿಲ್ಲೆಗೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ 2021-22 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ 10+1 ಕುರಿ/ಮೇಕೆ ಘಟಕ ಅನುಷ್ಟಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಗೆ ಎಸ್.ಸಿ-11.ಎಸ್.ಟಿ-04 ಹಾಗೂ ಸಾಮಾನ್ಯ-45. ಒಟ್ಟು-60 ಗುರಿಗಳನ್ನು ನಿಗದಿಪಡಿಸಲಾಗಿದ್ದು, ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಸದಸ್ಯತ್ವವನ್ನು ಹೊಂದಿರುವ 18 ರಿಂದ 60 ವಯೋಮಿತಿಯಲ್ಲಿರುವ ಎಸ್.ಸಿ/ಎಸ್.ಟಿ ಹಾಗೂ ಸಾಮಾನ್ಯ ವರ್ಗದ ಸದಸ್ಯರುಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಸದರಿ ಅರ್ಜಿಯನ್ನು ದಿನಾಂಕ:12/11/2021 ರಿಂದ ಈ ಕಛೇರಿಯಿಂದ ಅಥವಾ ನಿಗಮದಲ್ಲಿ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರಿ ಸಂಘದ ಕಛೇರಿಗಳಲ್ಲಿ ಪಡೆದು ಮರಳಿ ಕಛೇರಿಗೆ ದಿನಾಂಕ:02/12/2021ರ ಒಳಗಾಗಿ ಮೂರು ಪ್ರತಿಯಲ್ಲಿ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ದೃಢೀಕರಿಸಿ ಸಲ್ಲಿಸುವದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕಛೇರಿ ದೂರವಾಣಿ ಸಂಖ್ಯೆ0831-2431294 ಸಂಪರ್ಕಿಸಿ ಪಡೆಯಬಹುದಾಗಿದೆ.///

📱 Read Top News, Belgaum News Updates, Belagavi News in Kannada, Latest News on News Belgaum