Belagavi News In Kannada | News Belgaum

ಕ್ಷಮೆಯಾಚಿಸಿದ್ರು ಹಂಸಲೇಖರಿಗೆ ಕಿರುಕುಳ ನೀಡಲಾಗ್ತಿದೆ : ನಟ ಚೇತನ್

🌐 Belgaum News :

ಬೆಂಗಳೂರು : ಪೇಜಾವರ ಶ್ರೀ ಕುರಿತ ಹೇಳಿಕೆಗೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆಯಾಚಿಸಿದ್ದರೂ ಪೊಲೀಸ್ ದೂರುಗಳನ್ನು ನೀಡುವ ಮೂಲಕ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ .

ಈ ಕುರಿತು ಟ್ವಿಟ್ ಮಾಡಿರುವ ಅವರು , ‘ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಗುಂಪುಗಳು ಹಂಸಲೇಖ ಅವರು ಕ್ಷಮೆಯಾಚಿಸಿ ಒಂದು ವಾರವಾದ ಮೇಲೆಯೂ ಕೂಡ ಪೊಲೀಸ್ ದೂರುಗಳನ್ನು ನೀಡುವ ಮೂಲಕ ಅವರಿಗೆ ಕಿರುಕುಳ ನೀಡುತ್ತಲೇ ಇವೆ ‘ ಎಂದು ದೂರಿದ್ದಾರೆ .

‘ ಇಂತಹ ಬ್ರಾಹ್ಮಣ ಮತ್ತು ಬ್ರಾಹ್ಮಣ್ಯದ ಸಂಸ್ಥೆಗಳು , ಸಮಾನತೆಯನ್ನು ಬಯಸುವ ಮತ್ತು ಅದಕ್ಕಾಗಿ ಹೋರಾಡುವ ನಮ್ಮನ್ನು , ತಮ್ಮ ಅಧೀನದಲ್ಲಿಯೇ ಮುಂದುವರಿಸಲು ಬಯಸುತ್ತವೆ ‘ ಎಂದಿರುವ ನಟ ಚೇತನ್ , ನಾವು ಹಂಸಲೇಖ ಅವರ ಜೊತೆ ನಿಲ್ಲಬೇಕು ಎಂದು ಹೇಳಿದ್ದಾರೆ .////

📱 Read Top News, Belgaum News Updates, Belagavi News in Kannada, Latest News on News Belgaum