Belagavi News In Kannada | News Belgaum

ಬಾಂಬ್ ಸ್ಫೋಟ: ಹಳಿಯ ತಪ್ಪಿದ ರೈಲು, ಅದೃಷ್ಟವಶಾತ್ ಪ್ರಯಾಣಿಕರು ಪಾರು

🌐 Belgaum News :

ನವದೆಹಲಿ: ರೈಲು ಸಂಚರಿಸುವ ವೇಳೆಯಲ್ಲಿ ಹಳಿಯ ಮೇಲೆ ಬಾಂಬ್ ಸ್ಫೋಟವಾಗಿದ್ದು, ಚಾಲಕನ ನಿಯಂತ್ರಣ ಕೈ ತಪ್ಪಿ ಹಳಿತಪ್ಪಿದ ನಾಲ್ಕೈದು ಅಡ್ಡಿ ದೂರು ಉರಳಿರುವ ಘಟನೆ ಇಂದು ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಧನಬಾದ್ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಣದ ನಡುವೆ ಸಂಚರಿಸುವ ರೈಲಿಗೆ ಸ್ಫೋಟ ಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದು ಒಂದು ನಕ್ಸಲ್ ಸಂಬಂತ ಘಟನೆಯಾಗಿದೆ ಎಂದು ಮೂಲಗಳು ಸೂಚಿಸಿವೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಹಳಿಯ ಮೇಲೆ ಸಂಚಾರ ಪುನರಾರಂಭವಾಗುವುದನ್ನು ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum