Belagavi News In Kannada | News Belgaum

ಲಾರಿ ಮತ್ತು ಬೈಕ್‌ನ‌ ನಡುವೆ ಭೀಕರ ಅಪಘಾತ : ದಂಪತಿಗಳಿಬ್ಬರ ದುರ್ಮಣ

🌐 Belgaum News :

ದೊಡ್ಡಬಳ್ಳಾಪುರ: ಲಾರಿ ಮತ್ತು ಬೈಕ್‌ನ‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದಂಪತಿ ದುರ್ಮರಣಕ್ಕೀಡಾಗಿರುವ ಘಟನೆ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕತ್ತಿಹೊಸಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ.

ದೊಡ್ಡಬೆಳವಂಗಲ ಗ್ರಾಮದ ಶ್ಯಾಮನಾಯಕ್ (55) ಮತ್ತು ಶಾರದಮ್ಮ(45) ಮೃತ ದಂಪತಿ. ದೊಡ್ಡಬಳ್ಳಾಪುರದಿಂದ ದಾಬಸ್ ಪೇಟೆಗೆ ತೆರಳುವಾಗ ಅಪಘಾತ ನಡೆದಿದೆ. ಅಪಘಾತದ ನಂತರ ಲಾರಿ ಚಾಲಕ‌ ಸ್ಥಳದಿಂದ ಪರಾರಿಯಾಗಿದ್ದಾನೆ.

ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ./////

📱 Read Top News, Belgaum News Updates, Belagavi News in Kannada, Latest News on News Belgaum