Belagavi News In Kannada | News Belgaum

ಕಲೆಯನ್ನು ಉಳಿಸಿ ಕಲಾವಿದರ ಪೋಷಿಸಲು ಅಥಣಿ ಜನರ ಹಿಂದೇಟು!?

🌐 Belgaum News :

ಅಥಣಿ : ಅಥಣಿಯಲ್ಲಿ ಕಳೆದ ಮೂರು ತಿಂಗಳಿನಿಂದ ಶ್ರೀ ಗುರು ಖಾಸ್ಗತೇಶ್ವರ ನಾಟಕ ಕಂಪನಿಯಲ್ಲಿ ನುರಿತ ಕಲಾವಿದರಿಂದ ನಾಟಕ ಪ್ರದರ್ಶನವಾಗುತ್ತಿದೆ.ಸಮಾಜದ ಅಂಕುಡೊಂಕುಗಳನ್ನು ತಿದ್ದುವ ತಿಳಿಹಾಸ್ಯ ಮಿಶ್ರಿತ ಸುಂದರ ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯುತ್ತಿದ್ದು ಕಲಿಯುಗದ ಕುಡುಕ ನಾಟಕ ಖ್ಯಾತಿಯ ಹಾಗೂ ಚಲನಚಿತ್ರನಟ ರಾಜು ತಾಳಿಕೋಟಿ ಒಡೆತನದ ಕಂಪನಿಯಲ್ಲಿ ಈಗಾಗಲೇ ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ, ಅಪ್ಪ ಹಂಗ-ಮಗಾ ಹಿಂಗ,ಕಿವುಡ ಮಾಡಿದ ಕಿತಾಪತಿ,ಹಾಗೂ ಮಾನವಂತರ ಮನೆತನ ನಾಟಕಗಳನ್ನು ಪ್ರಯೋಗ ಮಾಡಲಾಗಿದೆ.ನಾಟಕಗಳ ಹಾಸ್ಯ ಪಾತ್ರಗಳಲ್ಲಿ ಕಿಟ್ಟು ಉಡುಪಿ,ಆನಂದ ಮುಧೋಳ,ಚೈತ್ರಾ ಕುಂದಾಪೂರ,ದಾನೇಶ ಗದಗ,ಮತ್ತು ಪ್ರಮುಖ ಪಾತ್ರಗಳಲ್ಲಿ
ಉಮೇಶ ಮಹಾಲಿಂಗಪೂರ,ಮಂಜುಳಾ ಲೋಕಾಪುರ, ಪ್ರೇಮಾ ತಾಳಿಕೋಟಿ, ಮುನ್ನಾ ಕುಕನೂರ, ಸೇರಿದಂತೆ ಹಲವರ ಅಭಿನಯ ಗಮನ ಸೆಳೆಯುವಂತಿದೆ.ಕಳೆದ ಮೂರು ತಿಂಗಳಿನಿಂದ ಹಲವು ಕಲಾವಿದರ ಸಂಬಳ,ಜಾಗದ ಬಾಡಿಗೆ,ವಿದ್ಯುತ್ ಬಿಲ್ ಸೇರಿದಂತೆ ಕಂಪನಿಯ ನೀರ್ವಹಣೆಗೆ ಸರಿಯಾದ ಕಲೆಕ್ಷಣ್ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾವಾಗಿದ್ದು
ಮಾನವಂತರ ಮನೆತನ ನಾಟಕದ ಬಳಿಕ ಸದ್ಯ ಮುದುಕನ ಮದುವೆ ನಾಟಕ ಪ್ರದರ್ಶನ ಕಾಣುತ್ತಿದ್ದು ಹಲವಾರು ಸಿಡಿ,ಕ್ಯಾಸೆಟ್ ಗಳ ಮೂಲಕ ರಾಜ್ಯದ ಕಲಾರಸಿಕರ ಮನತಣಿಸಿದ ಭೀಮಾಶಂಕರ ನಾಗನಸೂರ ಮತ್ತು ಉಳಿದ ಕಲಾವಿದರ ಅಭಿನಯ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.ಶನಿವಾರ ಮತ್ತು ರವಿವಾರ ಮೂರು ಪ್ರದರ್ಶನ ನಡೆಸಲಾಗುತ್ತಿದ್ದು ಉಳಿದ ದಿನಗಳಲ್ಲಿ ಮಧ್ಯಾಹ್ನ ಮೂರು ಹದಿನೈದು ಮತ್ತು ಸಂಜೆ ಆರು ಹದಿನೈದಕ್ಕೆ ಎರಡು ನಾಟಕ ಪ್ರದರ್ಶನ ಮಾಡಲಾಗುತ್ತಿದೆ.ಸದ್ಯ ಕೋವಿಡ್ ಕಾರಣದ ಲಾಕ್ ಡೌನ ನಿಂದಾಗಿ ಇಪತ್ತು ತಿಂಗಳಿಗೂ ಅಧಿಕ ಕಾಲದಿಂದ ನಾಟಕ ಪ್ರದರ್ಶನ ರದ್ದುಗೊಂಡು ಕಲೆಯನ್ನೆ ನಂಬಿ ಬದುಕುವ ಕಲಾವಿದರ ಜೀವನ ನೀರ್ವಹಣೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಸದ್ಯ ಕಲಾವಿದರನ್ನು ಪ್ರೋತ್ಸಾಹಿಸಿ ಕಲೆಯನ್ನು ಉಳಿಸುವ ಕೆಲಸಕ್ಕೆ ತಾಲೂಕಿನ ಜನರು ಕುಟುಂಬ ಸಮೇತ ನಾಟಕ ವೀಕ್ಷಣೆ ಮಾಡಿ ವೃತ್ತಿ ರಂಗಭೂಮಿಯ ಕಲಾವಿದರ ಬದುಕು ಕಟ್ಟಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಣ್ಣಾಸಾಬ ತೆಲಸಂಗ ಕಲಾಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.ಇನ್ನು ಮುಂಬರುವ ದಿನಗಳಲ್ಲಿ ಕಳ್ಳಗುರು ಸುಳ್ಳ ಶಿಷ್ಯ,ಕಲಿಯುಗದ ಕುಡುಕ,ಕಾಳಿಂಗ ಸರ್ಪ,ಯಾರನ್ನ ನಂಬುದು ಯಾರನ್ನ ಬಿಡೋದು, ಸೇರಿದಂತೆ ಹಲವು ನಾಟಕಗಳ ಪ್ರದರ್ಶನ ನಡೆಯಲಿದ್ದು ಅಥಣಿ ತಾಲೂಕಿನಲ್ಲಿ ವೃತ್ತಿರಂಗಭೂಮಿಯ ಅನ್ನದಾತರು ಹಾಗೂ ಆಶ್ರಯದಾತರಾದ ಕಲಾಸಕ್ತರು ಕಲೆಯನ್ನು ಪ್ರೋತ್ಸಾಹಿಸಿ, ಕಲಾವಿದರನ್ನು ಉಳಿಸುವ ಕೆಲಸಕ್ಕೆ ಕೈ ಜೋಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಸಂಘದ ಸಂಚಾಲಕರು ಪ್ರೇಮಾ ತಾಳಿಕೋಟಿ ಹೇಳಿದ್ದಾರೆ.//////

📱 Read Top News, Belgaum News Updates, Belagavi News in Kannada, Latest News on News Belgaum