Belagavi News In Kannada | News Belgaum

ಪರಿಷತ್ ಚುನಾವಣೆ: ಮತಗಟ್ಟೆ‌ ಸಾಮಗ್ರಿ ಪೂರೈಕೆಗೆ ಟೆಂಡರ್ ಆಹ್ವಾನ

🌐 Belgaum News :

ಬೆಳಗಾವಿ : ಕರ್ನಾಟಕ ವಿಧಾನಪರಿಷತ್ ( ಸ್ಥಳೀಯ ಸಂಸ್ಥೆಗಳ) ಚುನಾವಣೆ-2021 ಕ್ಕೆ ಸಂಬಂಧಿಸಿದಂತೆ ಮತಗಟ್ಟೆಗಳಿಗೆ ಬೇಕಾಗುವ ಸಾಮಗ್ರಿಗಳ ಪೂರೈಕೆಗಾಗಿ ಅಲ್ಪಾವಧಿಯ ಟೆಂಡರ್ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಪೂರೈಕೆದಾರರು ಟೆಂಡರ್ ನಮೂನೆಗಳನ್ನು ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯಲ್ಲಿ ನ.19 ರಿಂದ ನ. 25 ರೊಳಗೆ ಕಚೇರಿಯ ಅವಧಿಯಲ್ಲಿ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ನಮೂನೆಗಳನ್ನು ನ.26 ರಂದು ಮಧ್ಯಾಹ್ನ 3 ಗಂಟೆಯ ಒಳಗಾಗಿ ಚುನಾವಣಾ ಶಾಖೆಯಲ್ಲಿ ಇರುವ ಮೊಹರಬಂದ ಪೆಟ್ಟಿಗೆಯಲ್ಲಿ ಹಾಕಬೇಕು. ಅದೇ ಸಂಜೆ 5 ಗಂಟೆಗೆ ಟೆಂಡರ್ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಾಖೆಯನ್ನು ಸಂಪರ್ಕಿಸಬಹುದು./////

📱 Read Top News, Belgaum News Updates, Belagavi News in Kannada, Latest News on News Belgaum