Belagavi News In Kannada | News Belgaum

ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ ರದ್ಧು ಮಾಡುವಂತೆ ರೈತರ ಒತ್ತಾಯ: ನ.26ಕ್ಕೆ ರಾಷ್ಟ್ರೀಯ ಹೆದ್ದಾರಿ ಬಂದ್ ಗೆ ನಿರ್ಧಾರ

🌐 Belgaum News :

ಬೆಂಗಳೂರು:  ರಾಜ್ಯದಲ್ಲಿ ಎಪಿಎಂಸಿ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ತಿದ್ದುಪಡಿ ರದ್ದು ಮಾಡಬೇಕು, ಇದರಲ್ಲಿ ವಿಳಂಬವಾದರೆ ನ. 26 ರಂದು  ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿದ್ದೆವೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.

ಕೇಂದ್ರ ಸರ್ಕಾರ ಘೋಷಿಸಿದ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ಮೋದಿ ಘೊಷಿಸಿದ್ದಾರೆ. ಆದರೆ,  ಎಪಿಎಂಸಿ ಕಾಯ್ದೆ ಮತ್ತು ರಾಜ್ಯ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರದ್ದತಿಗೆ ಒತ್ತಾಯಿಸಲಾಗುತ್ತಿದೆ.   ಕಾರ್ಮಿಕರು ಕುರಿ, ಧನಕರುಗಳು, ಟ್ರಾಕ್ಟರ್‌ಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ.
ಈ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ.

ನವೆಂಬರ್ 26ರೊಳಗೆ ಒಂದು ವೇಳೆ ಸರ್ಕಾರ ತಿದ್ದುಪಡಿಗಳನ್ನು ರದ್ದುಪಡಿಸಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಸಂಯುಕ್ತ ಹೋರಾಟ ಕರ್ನಾಟಕ ಒಕ್ಕೂಟ ಎಚ್ಚರಿಕೆ ನೀಡಿದೆ.
ಯಾವೆಲ್ಲಾ ಹೆದ್ದಾರಿ ಬಂದ್?
ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ – ಶ್ರೀರಂಗಪಟ್ಟಣ
ಬೆಂಗಳೂರು -ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ – ಚದಲಪುರ ಕ್ರಾಸ್‌, ಚಿಕ್ಕಬಳ್ಳಾಪುರ
ರಾಷ್ಟ್ರೀಯ ಹೆದ್ದಾರಿ 13 – ಹೊಸಪೇಟೆ ಜಂಕ್ಷನ್‌
ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿ – ತುಮಕೂರು ಟೋಲ್‌ ಗೇಟ್‌/////

📱 Read Top News, Belgaum News Updates, Belagavi News in Kannada, Latest News on News Belgaum