Belagavi News In Kannada | News Belgaum

ಕರ್ನಾಟಕ ರತ್ನ ಸ್ಮರಣಾರ್ಥ: ಪೊಲೀಸರಿಂದ 50 ಕಿ.ಮೀ. ಸೈಕಲ್ ಜಾಥಾ

🌐 Belgaum News :

ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ಇಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ಸೈಕಲ್ ಜಾಥಾ ಹಮ್ಮಿಕೊಂಡಿದ್ದಾರೆ.

ಕಂಠೀರವ ಸ್ಟೇಡಿಯಂ ನಿಂದ 50 ಕಿ.ಮೀ ಸಾಗಲಿರುವ ಈ ಸೈಕಲ್ ಜಾಥಾಗೆ ಪುನೀತ್ ಸಹೋದರ ನಟ ಶಿವರಾಜ್ ಕುಮಾರ್ ಚಾಲನೆ ನೀಡಿದ್ದಾರೆ. ಈ ವೇಳೆ ಎಡಿಜೆಪಿ ಅಲೋಕ್ ಕುಮಾರ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಭಾಗಿಯಾಗಿದ್ದರು.

ಈ ಸೈಕಲ್ ಜಾಥಾ ಕಂಠೀರವ ಸ್ಟೇಡಿಯಂ ನಿಂದ ಹೊರಟು, ಚಾಲುಕ್ಯ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಬಿಇಎಲ್ ಸರ್ಕಲ್, ಗುರಗುಂಟೆಪಾಳ್ಯ, ನಾಗರಬಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್, ಬಿಟಿಎಂ ಜಕ್ಷನ್. ಸಿಲ್ಕ್ ಬೋರ್ಡ್, ರಿಚ್ಮಂಡ್ ಸರ್ಕಲ್, ಮೆಯೋ ಹಾಲ್ ಕಡೆಯಿಂದ ಪೊಲೀಸ್ ಹಾಕಿ ಗ್ರೌಂಡ್ ನಲ್ಲಿ ಅಂತ್ಯಗೊಳ್ಳಲಿದೆ./////

📱 Read Top News, Belgaum News Updates, Belagavi News in Kannada, Latest News on News Belgaum