Belagavi News In Kannada | News Belgaum

ಅಕ್ಷರಶಃ ನಲುಗಿ ಕರುನಾಡು: ಮದುವೆ, ಗೃಹಪ್ರವೇಶದಲ್ಲಿ ಬ್ಯುಸಿಯಾದ ಬೊಮ್ಮಾಯಿ ; ರಾಜ್ಯದ ಜನತೆಗೆ ಸ್ಪಂಧಿಸದ ಸಿಎಂ

🌐 Belgaum News :

ಬೆಂಗಳೂರು:    ಕುಂಭದ್ರೋಣ ಮಳೆಯಿಂದ ನೀರಿನಲ್ಲಿ ತೆಲುತ್ತಿದ್ದು, ರಾಜ್ಯದ ಕೆಲವೊಂದು ಜಿಲ್ಲೆಗಳು  ಅಕ್ಷರಶಃ ನಲುಗಿ ಹೋಗಿದೆ. ರಾಜ್ಯದ ಜನತೆ ಕಣ್ಣಿರು ವರಿಸಬೇಕಿದ್ದ ಸಿಎಂ ಬವಸರಾಜ ಬೊಮ್ಮಾಯಿ ಅವರುಮದುವೆ, ಗೃಹಪ್ರವೇಶ ಓಡಾಟದಲ್ಲಿ ಬ್ಯುಸಿಯಾಗಿದ್ದಾರೆ.

ಜನ ಜಾನುವಾರುಗಳು ಮರಣ‌ಮಳೆಗೆ ನೀರು ಪಾಲಾಗುತ್ತಿದ್ದಾರೆ. ಬೆಳೆಗಳು, ದವಸ ಧಾನ್ಯ ಕೊಚ್ಚಿ ಹೋಗಿ ಜನರು, ರೈತರು ಬೀದಿಗೆ ಬರೋ ಆತಂಕದಲ್ಲಿ ಇದ್ದಾರೆ. ಆದರೆ ಇದಕ್ಕೆಲ್ಲ ಸ್ಪಂದಿಸಬೇಕಾದ ಮುಖ್ಯಮಂತ್ರಿಗಳುಮದುವೆ, ಗೃಹಪ್ರವೇಶ ಓಡಾಟದಲ್ಲಿದಲ್ಲಿ ಇದ್ದಾರೆ.

ಜಲಪ್ರಳಯದ ಭೀತಿ:

ಕರುನಾಡು ಅಕ್ಷರಶಃ  ಜಲಪ್ರಳಯದ ಭೀತಿಯಲ್ಲಿದೆ.  ರಾಜ್ಯದಲ್ಲಿ ಜನರು ದಿನಸಿ,ತರಕಾರಿ ಸೇರಿದಂತೆ ಅಗತ್ಯ ವಸ್ತುಗಳಿಗಾಗಿ ಪರದಾಡುವ ಸ್ಥಿತಿ ಇದೆ. ಹಲವೆಡೆ ಜನರು ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಂಡು ದ್ವೀಪ ವಾಸಿಗಳಾಗಿ ದ್ದಾರೆ. ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ತಲುಪಿರುವ ಜನರು ನೀರಿನಲ್ಲೇ ನಿಂತು ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ‌.

ಚಿಕ್ಕಬಳ್ಳಾಪುರ, ಕೋಲಾರ, ದಾವಣೆಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯುವ ಸ್ಥಿತಿ ಇದೆ. ಆದರೆ ಇದಕ್ಕೆಲ್ಲ ತಕ್ಷಣ ಸ್ಪಂದಿಸಿ ಜನರಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿ ಕೆಲಸ ಮಾಡಿಸಬೇಕಿದ್ದ ಸಿಎಂ ವರ್ತನೆ ಮಾತ್ರ ತೀವ್ರ ಟೀಕೆಗೆ ಗುರಿಯಾಗಿದೆ.

ತಲೆಕೆಡಿಸಿಕೊಳ್ಳಲದ ಜಿಲ್ಲಾಧಿಕಾರಿಗಳು
ಸಿಎಂ ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದನ್ನು ಬಿಟ್ಟರೇ ಮತ್ತೆ ಮಳೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಸಿಎಂ ಭಾನುವಾರದ ಕಾರ್ಯಕ್ರಮ ಪಟ್ಟಿ ನೋಡಿದ ಮೇಲೆ ಜನರಿಗೆ ಸಿಎಂ‌ಮಳೆ ಹಾಗೂ ಅದರಿಂದಾದ ಹಾನಿ, ಅವಾಂತರಗಳ ಬಗ್ಗೆ ಕೊಂಚವೂ ಕಾಳಜಿ ಇಲ್ಲ ಎಂಬುದು ಸಾಬೀತಂತಾಗಿದೆ‌. ಸಿಎಂ‌ ಕಾರ್ಯಕ್ರಮಗಳನ್ನು ತಿಳಿಸುವ ಟಿಪಿ ಬಿಡುಗಡೆಗೊಂಡಿದ್ದು ಅದರಲ್ಲಿ ಸಿಎಂ ಮುಂಜಾರ್ನೆ ಗಂಟೆಗೆ ಸಿಎಂ ಅರಮನೆ ಮೈದಾನದಲ್ಲಿ ನಡೆಯಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಯವರ ದ್ವಿತೀಯ ಪುತ್ರಿ ಅನುಷಾ ಮದುವೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ./////

📱 Read Top News, Belgaum News Updates, Belagavi News in Kannada, Latest News on News Belgaum