Belagavi News In Kannada | News Belgaum

ಕುರಿ ಕಳ್ಳನನ್ನು ಬೆನಟ್ಟಿದ ಪಿಎಸ್ಐ ಭೀಕರ ಹತ್ಯೆ: ಆರೋಪಿಗಳು ಪರಾರಿ

🌐 Belgaum News :

ತಿರುಚಿ: ಕುರಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನ ಬೆನಟ್ಟ ಪಿಎಸ್ಐವೊಬ್ಬರನ್ನು ಖದೀಮರು ಭೀಕರವಾಗಿ ಕೊಲೆ  ಮಾಡಿರುವ  ದುರ್ಘಟನೆ  ತಿರುಚಿಯ ಪುದಕೇಡಿಯ ಕೇರ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಿಎಸ್ಐ ಭೂಮಿನಾಥನ್ ಎಂಬುವವರೇ ಹತ್ಯೆಯಾಗಿದ್ದು, ಬೈಕಿನಲ್ಲಿ ಕಳ್ಳರನ್ನ ಬೆನ್ನು ಹತ್ತಿದ ಸಮಯದಲ್ಲಿಯೇ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ.

ಸುಮಾರು ಹೊತ್ತಿನ ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪಿಎಸ್ಐ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನ ಕೇರ್ನೂರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಭಾಗದಲ್ಲಿ ನಿರಂತರವಾಗಿ ಕುರಿಗಳ  ಕಳ್ಳತನ ನಡೆಯುತ್ತಿದ್ದರಿಂದ ಪೊಲೀಸರು ಹುಡುಕಾಟ ಆರಂಭಿಸಿದ್ದರು.   ಅದೇ ಕಾರಣಕ್ಕೆ ಪಿಎಸ್ಐ ಹತ್ಯೆಯಾಗಿರುವುದೆಂದು ಗೊತ್ತಾಗಿದೆ.//////

📱 Read Top News, Belgaum News Updates, Belagavi News in Kannada, Latest News on News Belgaum