Belagavi News In Kannada | News Belgaum

ಕಸಾಪ ಫಲಿತಾಂಶ: ಎರಡನೇ ಬಾರಿಗೆ ಮಂಗಲಾ ಮೆಟಗುಡ್ಡ ಭರ್ಜರಿ ಗೆಲುವು

🌐 Belgaum News :

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ  ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಫಲಿತಾಂಶ ಪ್ರಕಟವಾಗಿದ್ದು, ಎರಡನೇ ಬಾರಿಗೆ ಮಂಗಲಾ ಮೆಟಗುಡ್ಡ  ಭರ್ಜರಿ ಗೆಲುವು ಸಾಧಿಸಿದಾರೆ.

ಮಂಗಲಾ ಮೆಟಗುಡ್ಡ ಆಯ್ಕೆಯಾದ ಹಿನ್ನೆಲೆ  ಅಭಿಮಾನಿಗಳು ಇಲ್ಲಿನ ರಾಣಿ ಚನ್ನಮ್ಮಾ ವೃತ್ತದಲ್ಲಿ ಪಟಾಕಿ ಸಿಡಿಸಿ,  ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ವೇಳೆ  ಮಂಗಲಾ ಮೆಟಗುಡ್ಡ ಅವರು‌ ಮಾತನಾಡಿ, ಕಳೆದ ಐದು ವರ್ಷಗಳ ಕಾಲ ಗಡಿನಾಡಿನಲ್ಲಿ ಕನ್ನಡಕ್ಕಾಗಿ  ಮಾಡಿದ ಸೇವೆ ನನ್ನದು ಕೈಹಿಡಿದಿದೆ.  ಇದು ನನ್ನ ಗೆಲುವಲ್ಲ ಗಡಿ ಕನ್ನಡಿಗರ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಕನ್ನಡ ಮನಸ್ಸುಗಳಿಗೆ ಧನ್ಯವಾದ ತಿಳಿಸಿದರು.
ತಾವೆಲ್ಲ ನನ್ನನ್ನು ಬಹುಮತದಿಂದ ಆಯ್ಕೆ ಮಾಡಿದ್ದಿರಾ. ಗಡಿ ಮತ್ತಷ್ಟು ಕನ್ನಡ ಸೇವೆ ಅವಕಾಶ ಸಿಕ್ಕಂತಾಯಿತು ಎಂದರು,

ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ಸದಸ್ಯರು ಹಾಗೂ ಮಂಗಳಾ ಮೆಟಗುಡ್ಡ ಅಭಿಮಾನಿಗಳೂ ಹಾಗೂ ಇತರರು ಇದ್ದರು.////

📱 Read Top News, Belgaum News Updates, Belagavi News in Kannada, Latest News on News Belgaum