Belagavi News In Kannada | News Belgaum

ಬಿಎಸ್ ವೈ ಯೋಜನೆಗಳಿಗೆ ತಡೆಯೊಡ್ಡಿದ ಸಿಎಂ ಬೊಮ್ಮಾಯಿ !

🌐 Belgaum News :

ಬೆಂಗಳೂರು : ಬಿ.ಎಸ್.ಯಡಿಯೂರಪ್ಪ ಸರ್ಕಾರ ಘೋಷಿಸಿದ್ದ ಎರಡು ಮಹತ್ವಾಕಾಂಕ್ಷಿ ಯೋಜನೆಗಳಿಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ತಡೆಯೊಡ್ಡಿರುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

ಹೊಸ ಸರ್ಕಾರಿ ವಿದ್ಯುತ್ ಕಾರ್ಖಾನೆ (ಎನ್‌ಜಿಇಎಫ್) ಭೂಮಿಯಲ್ಲಿ ಮರ ಉದ್ಯಾನವನ ನಿರ್ಮಾಣ ಮತ್ತು ಮೈಸೂರ್ ಲ್ಯಾಂಪ್ಸ್ ಫ್ಯಾಕ್ಟರಿಯ ರೂಪಾಂತರ ಯೋಜನೆಗಳನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2019ರಲ್ಲಿ ಘೋಷಿಸಿದ್ದರು. ಇದಕ್ಕೆ 2021-22ರ ಬಜೆಟ್‌ನಲ್ಲಿ ಅನುದಾನವನ್ನೂ ಮಂಜೂರು ಮಾಡಿದ್ದರು. ಈ ಯೋಜನೆಗಳನ್ನು ನಿರ್ವಹಿಸಲು ಹೊಸ ಟ್ರಸ್ಟ್‌ಗಳನ್ನು ರಚಿಸುವ ಸಂಬಂಧ ಸಿಎಂ ಬೊಮ್ಮಾಯಿ ಅವರ ಅಸಮಾಧಾನ, ಈ ಯೋಜನೆಗಳ ಪ್ರಗತಿಗೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ.

ಮಲ್ಲೇಶ್ವರಂನಲ್ಲಿರುವ ಮೈಸೂರು ಲ್ಯಾಂಪ್ಸ್ ಆವರಣದಲ್ಲಿ ಮ್ಯೂಸಿಯಂ, ಮನೋರಂಜನಾ ಸ್ಥಳ, ಸಾಂಸ್ಕೃತಿಕ ಕೇಂದ್ರ ಹಾಗೂ ಅನುಶೋಧನಾ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದರೆ,105 ಎಕರೆಯ ಎನ್‌ಜಿಇಎಫ್ ಭೂಮಿಯನ್ನು ಸಮ್ಮೇಳನ ಕೇಂದ್ರ ನಿರ್ಮಾಣ ಹಾಗೂ ಸಾರ್ವಜನಿಕ ಪ್ರದೇಶವಾಗಿ ಪರಿವರ್ತಿಸಲು ಉದ್ದೇಶಿಸಲಾಗಿತ್ತು. ಎಕ್ಸ್‌ಪೀರಿಯನ್ಸ್ ಬೆಂಗಳೂರು ಬ್ರಾಂಡ್‌ನಡಿ ಈ ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು.

ಈ ಯೋಜನೆಗಳ ಮೇಲುಸ್ತುವಾರಿಗಾಗಿ ಮತ್ತು ವಿಸ್ತೃತವಾದ ಯೋಜನಾ ನಕ್ಷೆ ಸಿದ್ಧಪಡಿಸಲು ಜೂನ್‌ನಲ್ಲಿ ಸರ್ಕಾರ ಬೆಂಗಳೂರು ಹೆರಿಟೇಜ್ ಆಯಂಡ್ ಎನ್ವಿರಾನ್‌ಮೆಂಟ್ ಟ್ರಸ್ಟ್ ನೋಂದಾಯಿಸಿತ್ತು. ಬೆಂಗಳೂರು ಮಿಷಿನ್ ಯೋಜನೆಯ ಇತರ ಕಾಮಗಾರಿಗಳು ವೇಗವಾಗಿ ಮುಂದುವರಿದಿದ್ದರೆ ಈ ಎರಡು ಯೋಜನೆಗಳು ಮಾತ್ರ ನನೆಗುದಿಗೆ ಬಿದ್ದಿವೆ. ಈ ಯೋಜನೆಗಳ ನಿರ್ವಹಣೆಯನ್ನು ಚಾರಿಟಬಲ್ ಟ್ರಸ್ಟ್‌ಗೆ ಒಪ್ಪಿಸುವ ಪ್ರಸ್ತಾವದ ಬಗ್ಗೆ ಬೊಮ್ಮಾಯಿ ಅಸಮಾಧಾನ ಹೊಂದಿರುವುದೇ ಯೋಜನೆ ಕಾರ್ಯಾರಂಭವಾಗದಿರಲು ಕಾರಣ ಎನ್ನಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum