Belagavi News In Kannada | News Belgaum

ಪೃಥ್ವಿ ಫೌಂಡೇಶನ್ ವತಿಯಿಂದ ಅನುಪಮ ಸೇವಾರತ್ನ ಪ್ರಶಸ್ತಿ ಪ್ರದಾನ

🌐 Belgaum News :

ಪೃಥ್ವಿ ಫೌಂಡೇಶನ್ ವತಿಯಿಂದ ಅನುಪಮ ಸೇವಾರತ್ನ ಪ್ರಶಸ್ತಿ ಪ್ರದಾನ ಮತ್ತು ಸಾಹಿತಿ ನಾಗೇಶ ನಾಯಕರವರಕೃತಿ ಬಿಡುಗಡೆ♦️ ಇದೇ ಮಂಗಳವಾರ 23 ರಂದು ಬೆಳಗಾವಿ ನಗರದ  ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿಯ ‘ಪೃಥ್ವಿ ಫೌಂಡೇಶನ್’ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಅನುಪಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಹಿತಿ ನಾಗೇಶ ನಾಯಕಅವರು ರಚಿಸಿದ ಕೃತಿ ಬಿಡುಗಡೆ ಸಮಾರಂಭ ನಡೆಯಿತು. ಸಮಾರಂಭದಅಧ್ಯಕ್ಷತೆ ವಹಿಸಿದ್ದ     ‘ಪೃಥ್ವಿ ಫೌಂಡೇಶನ್ ಬೆಳಗಾವಿ’ಯ ಅಧ್ಯಕ್ಷರಾದಡಾ. ಹೇಮಾವತಿ ಸೊನೋಳ್ಳಿ ಮಾತನಾಡಿ ಪೃಥ್ವಿ ಫೌಂಡೇಶನ್‍ತನ್ನ ಸದಸ್ಯರಿಂದಲೇದೇಣಿಗೆ ಸಂಗ್ರಹಿಸಿ ವಿವಿಧ ಸಮಾಜಪರ ಕೆಲಸಗಳನ್ನು ಮಾಡುತ್ತಿದೆ.

 

ದಾನಿಗಳಿಂದ ಬಂದ ಹಣವನ್ನು ಸಹ ನಿಸ್ವಾರ್ಥದಿಂದ ಸೇವೆಗಾಗಿಯೇ ಬಳಸುತ್ತಿದೆ ಎಂದರು. ಫೌಂಡೇಶನ್ ನ ಸಹ ಕಾರ್ಯದರ್ಶಿ ರಶ್ಮಿ ಪಾಟೀಲ ರವರು ಪೃಥ್ವಿ ಪೌಂಡೇಶನ್‍  ಆರು ವರ್ಷಗಳಲ್ಲಿ ನಡೆದು ಬಂದ  ದಾರಿಯನ್ನು ವರದಿಯರೂಪದಲ್ಲಿ ವಾಚಿಸಿದರು. ಸಾಹಿತಿಇಂದಿರಾ ಮೋಟೆ  ಬೆನ್ನೂರು ಸಾಧಕರನ್ನು ಪರಿಚಯಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ನಾಗೇಶ ನಾಯಕಅವರು ಬರೆದ ‘ಆತ್ಮಧ್ಯಾನದ ಬುತ್ತಿ ‘ಗಜಲ್ ಗಳ ಸಂಕಲನವನ್ನು ಸಾಹಿತಿಡಾ. ಪಿ ಜೆ. ಕೆಂಪನ್ನವರ ಬಿಡುಗಡೆಗೊಳಿಸಿ ಮಾತನಾಡಿ ಗಜಲ್ಗಳು ಮನಸ್ಸನ್ನು ಮೋಹಿಸುವ ಮತ್ತು ಅರಳಿಸುವ ಸಾಹಿತ್ಯದ ಪ್ರಕಾರವಾಗಿದೆ.

 

ಧ್ಯಾನ ಮಾಡಿದರೆಜ್ಞಾನತಾನಾಗಿಯೇ ಬೆಳೆಯುತ್ತೆ ಎಂಬ ನೀತಿಯನ್ನು ಹೇಳುವ ಗಜಲ್ಗಳು ನಿಜಕ್ಕೂ ನಮ್ಮಜೀವನಕ್ಕೆ ಸಹಕಾರಿಯಾಗಿವೆ ಮತ್ತು ವಿಶೇಷವಾಗಿವೆಎಂದರು. ಕೃತಿ ಪರಿಚಯಿಸುತ್ತ ಮಾತನಾಡಿದ ಸಾಹಿತಿಡಾ. ನಿರ್ಮಲಾ ಬಟ್ಟಲ ನಮ್ಮಲ್ಲಿನಆತ್ಮದಚಿಂತನೆ ಮಾಡುತ್ತಾಧ್ಯಾನದಿಂದ ನಾವು ಪರಿಶುದ್ಧರಾಗೋಣ, ನಾವು ಅಸಹಾಯಕರಿಗೆ ಸಹಾಯ ಮಾಡಿದರೆ ನಾವೇ ದೇವರಾಗಬಹುದು.

 

ಆ ನಿಟ್ಟಿನಲ್ಲಿ ಹಸಿವು, ಮನುಷ್ಯತ್ವ ಮರೆತವರು,ಜಾತೀಯತೆದ್ವೇಷಕಾರುವವರಿಗೂ ಪ್ರೀತಿ ಬಿತ್ತುವತುಡಿತದಗಜಲ್ ಗಳು ನಮ್ಮಲ್ಲಿ ಪರಿವರ್ತನೆ ಮಾಡುವರೀತಿಯಲ್ಲಿ ಮೂಡಿಬಂದಿವೆ. ಜೀವನೋತ್ಸಾಹ ಹೆಚ್ಚಿಸುವಆತ್ಮವನ್ನು ಶುದ್ದಿಸುವ ಗಜಲ್ ಗಳು ಈ ಕೃತಿಯಲ್ಲಿಅಡಗಿವೆಎಂದು ಪರಿಚಯಿಸಿದರು. ಕೃತಿ ಬರೆದ ನಾಗೇಶ ನಾಯಕ ಮಾತನಾಡಿಇತ್ತೀಚಿಗೆ ಕೃತಿಗಳು ಬಿಡುಗಡೆಯಾದಜಿಲ್ಲೆಯಲ್ಲಿ ಮಾತ್ರ ಪ್ರಚಾರ ಪಡೆಯುತ್ತಿರುವುದರಿಂದಕೃತಿಕಾರರ ಪರಿಚಯ ನಾಡಿಗೆಆಗುತ್ತಿಲ್ಲ.ಅದಕ್ಕೆ ವಿವಿಧ ಜಿಲ್ಲೆಗಳಲ್ಲಿ ಕೃತಿಯನ್ನು ಬಿಡುಗಡೆ ಮಾಡುತ್ತಿದ್ದೇನೆ.

 

ಅನೇಕರ ಪ್ರೇರಣೆ ನನಗೆ ಕೃತಿಗಳನ್ನು ಬರೆಯಲು ಸಹಕಾರಿಯಾಗಿದೆಎಂದರು .

 

ಇದೇ ಸಂದರ್ಭದಲ್ಲಿ ‘ಪೃಥ್ವಿ ಫೌಂಡೇಶನ್’ ವತಿಯಿಂದ ಸಮಾಜದ ವಿವಿಧ ಸ್ತರಗಳಲ್ಲಿ ಸೇವೆಯನ್ನು ಸಲ್ಲಿಸಿದ ಶಾಂತಾ ಮಸೂತಿ, ಸುಧಾ ಪಾಟೀಲ, ಡಾ. ಶೈಲಜಾಕುಲಕರ್ಣಿಯವರಿಗೆ ‘ಅನುಪಮಾ ಸೇವಾರತ್ನ   ಪ್ರಶಸ್ತಿ’ ಪ್ರದಾನ ಮಾಡಿಅವರ ಅನುಪಮ ಸಾಧನೆಯನ್ನು ನೆನೆದುಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರಿನ ‘ಆತ್ಮಶ್ರೀ ಕನ್ನಡ ಸಾಂಸ್ಕøತಿಕ ಪ್ರತಿನ’ ರವರ ವತಿಯಿಂದಉತ್ತರಕರ್ನಾಟಕ ಸಂಪರ್ಕ ಪ್ರತಿನಿಧಿಯಾದ ಶಶಿಧರ ಹಿರೇಮಠರವರುಉತ್ತರಕರ್ನಾಟಕ ಭಾಗದ ಸಾಧಕಿಯರಾದಡಾ. ಹೇಮಾವತಿ ಸೊನೋಳ್ಳಿ, ಶಾಂತಾ ಮಸೂತಿ, ಮತ್ತು ಶಶಿಕಲಾ ಯಲಿಗಾರರವರಿಗೆ ‘ಆತ್ಮಶ್ರೀ ಕನ್ನಡರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಿದರು.

 

ಕಾರ್ಯಕ್ರಮದಲ್ಲಿ ಬೆಳಗಾವಿ ನಗರಕೇಂದ್ರಗ್ರಂಥಾಲಯದಉಪನಿರ್ದೇಶಕರಾದ ಜಿ ರಾಮಯ್ಯ,ಹಿರಿಯ ಸಾಹಿತಿಗಳಾದ ಹಮೀದಾ ಬೇಗಮ್‍ದೇಸಾಯಿ , ಜ್ಯೋತಿ ಮಾಳಿ ಸುರೇಖಾ ಮಾನ್ವಿ, ಜ್ಯೋತಿ ಬದಾಮಿ, ಶೈಲಜಾ ಭಿಂಗೆ, ಜ್ಯೋತಿ ಮಾಳಿ, ಶೋಭಾತೆಲಸಂಗ,ಮಹಾನಂದ ಪಾರು ಶೆಟ್ಟಿ,ಜಯಶ್ರೀ ನಿರಾಹಾರಿ, ಶೈಲಜಾ ಹಿರೇಮಠ, ಮಹಾದೇವಿ ಹಿರೇಮಠ, ರಶ್ಮಿ ಪಾಟೀಲ, ಲಲಿತಾ ಪರ್ವತರಾವ, ಶ್ರೀರಂಗ ಜೋಶಿ, ಎಂ.ವೈ.ಮೆಣಸಿನಕಾಯಿ, ಶಿವಾನಂದ ತಲ್ಲೂರ, ವೀರಭದ್ರಅಂಗಡಿ, ಮಧುಕರಗುಂಡೇನಟ್ಟಿ ಸೇರಿದಂತೆ ಪೃಥ್ವಿ ಫೌಂಡೇಶನ್ ನ ಸರ್ವ ಸದಸ್ಯರು ಮತ್ತು ಸಾಹಿತ್ಯಾಸಕ್ತರು ಹಾಜರಿದ್ದರು.

 

ಕಾರ್ಯಕ್ರಮದಆರಂಭದಲ್ಲಿ ಹೇಮಾ ಬರಬರಿ ಪ್ರಾರ್ಥಿಸಿದರು. ಶೈಲಜಾ ಹಿರೇಮಠ ಸ್ವಾಗತಿಸಿದರು. ಆಶಾ ಯಮಕನಮರಡಿಕಾರ್ಯಕ್ರಮವನ್ನು ನಿರೂಪಿಸಿದರು ವನೇಶ್ವರಿ ಪೂಜೇರಿ ವಂದಿಸಿದರು

📱 Read Top News, Belgaum News Updates, Belagavi News in Kannada, Latest News on News Belgaum