Belagavi News In Kannada | News Belgaum

ಸಿಲಿಂಡರ್ ಸ್ಫೋಟ : ದೇಹ ಛಿದ್ರ ಛಿದ್ರ, 10 ಮಂದಿಗೆ ಗಂಭೀರ ಗಾಯ

🌐 Belgaum News :

ಸೇಲಂ:  ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್‌ ಸ್ಪೋಟಗೊಂಡು ಮಹಿಳೆ ದೇಹ ಛಿದ್ರ  ಛಿದ್ರವಾಗಿದ್ದು,  10  ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ  ತಮಿಳುನಾಡಿನ ಸೇಲಂನಲ್ಲಿ ಕಳಿಂಗಪಟ್ಟಿ ಎಂಬಲ್ಲಿ ನಡೆದಿದೆ.

ಸಿಲಿಂಡರ್ ಸ್ಫೋಟ : ಮಹಿಳೆ ದೇಹ ಛಿದ್ರ ಛಿದ್ರ, 10 ಮಂದಿಗೆ ಗಂಭೀರ ಗಾಯ

ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯವನ್ನು ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ರಾಜಲಕ್ಷ್ಮಿ (80  ) ಎಂಬವರೇ ಮೃತ ದುದೈವಿ. ಬೆಳಗ್ಗೆ ಚಹಾ ಮಾಡುವ ಸಲುವಾಗಿ ಗ್ಯಾಸ್‌ ಆನ್‌ ಮಾಡಿದ್ದಾರೆ. ಈ ವೇಳೆಯಲ್ಲಿ ಬೆಂಕಿ ಕಾಣಿಸಿಕೊಂಡು ಗ್ಯಾಸ್‌ ಸ್ಪೋಟಗೊಂಡಿದೆ. ವೆಂಕಟರಾಜನ್ (62  ), ಇಂದಿರಾಣಿ (54 ), ಮೋಹನ್ ರಾಜ್ (40 ), ನಾಗಸುತ (30 ), ಗೋಪಾಲ್ (70), ಧನಲಕ್ಷ್ಮಿ (64 ), ಸುದರ್ಶನ್ (6 ), ಗಣೇಶನ್ (37 ), ಉಷಾರಾಣಿ (40ವರ್ಷ), ಲೋಕೇಶ್ (10 ವರ್ಷ) ಎಂಬವರೇ ಗಾಯಗೊಂಡವರು.

ಘಟನೆಯಿಂದಾಗಿ ಅಕ್ಕ ಪಕ್ಕದಲ್ಲಿನ ಸುಮಾರು ನಾಲ್ಕೈದು ಮನೆಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಗೋಪಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಅವರಿಗೆ ಶೇ.90ರಷ್ಟು ಸುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಒಟ್ಟು ೧೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಅಲ್ಲದೇ ಘಟನೆಯ ಕುರಿತು ತನಿಖೆ ಮುಂದುವರಿದಿದೆ.

📱 Read Top News, Belgaum News Updates, Belagavi News in Kannada, Latest News on News Belgaum