Belagavi News In Kannada | News Belgaum

ಕಲಾವಿದ ಬಹೂರೂಪಿ ಅವರಿಗೆ ಡಾಕ್ಟರೇಟ್

🌐 Belgaum News :
ಅಥಣಿ: ಅಥಣಿಯ ಖ್ಯಾತ ಚಿತ್ರ ಕಲಾವಿದ ಪ್ರತಾಪ ಬಹೂರೂಪಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್. ಡಿ ಪದವಿ ಪ್ರದಾನ ಮಾಡಿದೆ. ಸಂಗೀತ ಮತ್ತು ಲಲಿತಕಲಾ ವಿಭಾಗದ ಪ್ರಾಧ್ಯಾಪಕ ಡಾ.ಎಮ್ ಎಚ್ ಅಗಡಿ ಮಾರ್ಗದರ್ಶನ ಹಾಗೂ ಡಾ ಎಸ್ ಸಿ ಪಾಟೀಲ ಅವರ ಸಹ ಮಾರ್ಗದರ್ಶನದಲ್ಲಿ “ಕರ್ನಾಟಕ ಅಲೆಮಾರಿ ಬುಡಕಟ್ಟುಗಳ ಚಿತ್ರಕಲೆ” ಎನ್ನುವ ವಿಷಯದ ಮೇಲೆ ಪ್ರತಾಪ ಬಹೂರೂಪಿ ಅವರು ಸಲ್ಲಿಸಿದ ಪಿ ಹೆಚ್ ಡಿ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ.
ಪ್ರಸ್ತುತ ಬಹುರೂಪಿ ಅವರು ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತಕಲಾ ಮಾಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲೆಮಾರಿ ಸಮುದಾಯಗಳಲ್ಲಿ ಶೈಕ್ಷಣಿಕ ಜಾಗೃತಿ, ಅಲೆಮಾರಿ ಕಲೆ, ಸಂಸ್ಕೃತಿ ರಕ್ಷಣೆ ಹಾಗೂ ಸಂಘಟನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಬುಡಕಟ್ಟು  ಸಮುದಾಯಕ್ಕೆ ಸೇರಿದ ಪ್ರತಾಪ ಬಹೂರೂಪಿ ಅಲೆಮಾರಿಗಳ ಚಿತ್ರಕಲೆ ಕುರಿತು ಪಿಹೆಚ್ ಡಿ ಮಾಡುವ ಮೂಲಕ ಹೊಸ ಆಯಾಮವೊದನ್ನು ಅನಾವರಣಗೊಳಿಸಿದ್ದಾರೆ.
📱 Read Top News, Belgaum News Updates, Belagavi News in Kannada, Latest News on News Belgaum