Belagavi News In Kannada | News Belgaum

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪರಗೆ ಎಸಿಬಿ ಬಿಗ್ ಶಾಕ್: ಎಂಟು ಕೆಜಿ ಚಿನ್ನದ ಬಿಸ್ಕೆಟ್ ಪತ್ತೆ, ಅಗೆದಷ್ಟು ಆಳ

🌐 Belgaum News :

ಶಿವಮೊಗ್ಗ:  ಗದಗ ಜಿಲ್ಲೆಯ ಜಂಟಿ  ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪರಗೆ  ಎಸಿಬಿ ಶಾಕ್ ನೀಡಿದ್ದು,  ಶಿವಮೊಗ್ಗ ಮನೆಯಲ್ಲಿ ಕೋಟ್ಯಾಂತರ ಚಿನ್ನಾಭರಣ, ನಗದನ್ನು ಪತ್ತೆಯಾಗಿದೆ.

ಎಸಿಬಿ  ಅಧಿಕಾರಿಗಳು ಅಗೆದಷ್ಟು ಆಳ ಹೊರಬರುತ್ತಲೆ ಮಾಹಿತಿ ತಿಳಿದಿದೆ.  ಇಂದು ಬೆಳ್ಳಂಬೆಳಗ್ಗೆ ಶಿವಮೊಗ್ಗ ಚಾಲುಕ್ಯ ನಗರದ ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು‌ ಎಂಟು ಕೆ.ಜಿ.ಬಂಗಾರದ ಗಟ್ಟಿ(ಚಿನ್ನದ ಬಿಸ್ಕೆಟ್), ಒಂದೂವರೆ ಕೆಜಿ ಬಂಗಾರದ ಆಭರಣಗಳು, ಮೂರು ಕೆಜಿಗೂ ಹೆಚ್ಚು ಬೆಳ್ಳಿ ವಸ್ತುಗಳು ಮತ್ತು 15 ಲಕ್ಷ ರೂಪಾಯಿ ಹಣ ಪತ್ತೆ ಹಚ್ಚಿದ್ದಾರೆ.


ಅಕ್ರಮ ನಾಟವೋ ಇಲ್ಲವೇ ಪರವಾನಗಿ ಸಹಿತ ಖರೀದಿ ಮಾಡಿದ್ದಾರೆಯೇ ಎಂದು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಎಸಿಬಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಇದಲ್ಲದೆ ವಿವಿಧ ಆಸ್ತಿಗಳ ದಾಖಲೆಯೂ ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದರು./////

📱 Read Top News, Belgaum News Updates, Belagavi News in Kannada, Latest News on News Belgaum