Belagavi News In Kannada | News Belgaum

ಗದಗ ಕೃಷಿ ಇಲಾಖೆ ಜೆ.ಡಿ ಮನೆ ಮೇಲೆ ಎಸಿಬಿ ದಾಳಿ: 15 ಲಕ್ಷ ನಗದು, 3 ಕೋಟಿ ಮೌಲ್ಯದ ಚಿನ್ನ ಪತ್ತೆ

🌐 Belgaum News :

ಗದಗ : ಸವಿನಿದ್ದೆಯಲ್ಲಿದ್ದ ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ. ಗದಗ ನಗರದಲ್ಲಿನ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಅವರ ಮನೆಯಲ್ಲಿ ಮೇಲೂ ದಾಳಿ ಆಗಿದ್ದು, 7 ಕೆಜಿ ಚಿನ್ನ, 15 ಲಕ್ಷ ನಗದು, 3 ಕೋಟಿ ಮೌಲ್ಯದ 9ಎಫ್​ ಗೋಲ್ಡ್​ ಪತ್ತೆಯಾಗಿದೆ.

ನಗರದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪ ಅವರ ಹುಡ್ಕೋ ಕಾಲೋನಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ರುದ್ರೇಶಪ್ಪಗೆ ಸಂಬಂಧಿಸಿದ ಗದಗ, ಶಿವಮೊಗ್ಗ, ದಾವಣಗೆರೆ, ಸೇರಿದಂತೆ ಐದು ಮನೆಗಳ ಮೇಲೆ ಕೂಡ ದಾಳಿ ನಡೆಸಿದ್ದಾರೆ.

ಅಧಿಕಾರಿ ರುದ್ರೇಶಪ್ಪನನ್ನು ಪಕ್ಕದಲ್ಲೇ ಕೂರಿಸಿಕೊಂಡು ಕಡತಗಳು, ಕಂಪ್ಯೂಟರ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ರುದ್ರೇಶ್ ಅವರನ್ನ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.ಇನ್ನು ತಪಾಸಣೆ ವೇಳೆ ರುದ್ರೇಶಪ್ಪ ಅವರ ಮನೆಯಲ್ಲಿ 7 ಕೆಜಿ ಚಿನ್ನ, 15 ಲಕ್ಷ ನಗದು, 3 ಕೋಟಿ ಮೌಲ್ಯದ 9ಎಫ್​ ಗೋಲ್ಡ್​ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕೃಷಿ ನಿರ್ದೇಶಕ ಕಚೇರಿ ಕಚೇರಿ ಬೀಗ ಹಾಕಿರೋ ಹಿನ್ನೆಲೆಯಲ್ಲಿ ಕಚೇರಿ ಮುಂದೆ ಹಾವೇರಿ ಎಸಿಬಿ ಅಧಿಕಾರಿಗಳ ತಂಡ ಕಾದು ಕುಳಿತಿದೆ./////

📱 Read Top News, Belgaum News Updates, Belagavi News in Kannada, Latest News on News Belgaum