Belagavi News In Kannada | News Belgaum

ಶಿಸ್ತು ,ಕಠಿಣ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ: ಮಹೇಂದ್ರಕರ

🌐 Belgaum News :

ಚಿಕ್ಕೋಡಿ : ವಿದ್ಯಾರ್ಥಿಗಳು ದೊರೆತ ಅವಕಾಶಗಳ ಸದ್ಬಳಕೆ ಮಾಡಿಕೊಳ್ಳಬೇಕಾದರೇ ಪುಸ್ತಕದ ಜ್ಞಾನದ ಜೊತೆಗೆ ಪ್ರಾತ್ಯಕ್ಷಿಕ ಜ್ಞಾನ ಪಡೆದುಕೊಳ್ಳಬೇಕು”  ಎಂದು ಪುಣೆಯ ಫ್ರೆಮ್ ಪ್ರಾಸೆಸ್ ಆಯ್ಯಂಡ್ ಎನರ್ಜಿಯ ಹಿರಿಯ ಇಂಜಿನಿಯರ್ ಭಿಮರಾವ ಮಹೇಂದ್ರಕರ ಹೇಳಿದರು.

ಇಲ್ಲಿನ ಕೆ. ಎಲ್. ಇ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಮೇಕ್ಯಾನಿಕಲ್ ಇಂಜಿನಿಯರಿಂಗ್   ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸುಜಿಯಿಂದ ಸೆಟೆಲೈಟವರೆಗೆ ಎಲ್ಲಾ ವಸ್ತುಗಳನ್ನು ಮೆಕ್ಯಾನಿಕಲ್ ಇಂಜಿನಿಯರ್ ನಿರ್ಮಿಸುತ್ತಾನೆ. ಹೀಗಾಗಿ ಯಾವತ್ತು ಮೆಕ್ಯಾನಿಕಲ್ ಇಂಜಿನಿಯರುಗಳಿಗೆ ವಿಪುಲ ಅವಕಾಶಗಳಿರುತ್ತವೆ.  ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಕಾಣಲು ಸಾಧ್ಯ,  ನೀವು ಸಮಾಜದಲ್ಲಿ ಉನ್ನತ್ತ ಸ್ಥಾನಕ್ಕೇರಿದಾಗ ಪಾಲಕರಿಗೂ ಗೌರವ ಸಿಕ್ಕಂತಾಗುತ್ತದೆ ಎಂದು  ಹೇಳಿದರು.

ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಅಧ್ಯಕ್ಷತೆವಹಿಸಿ, ಈಗಾಗಲೇ ತಾವು ಒಂದು ಅದ್ಭುತವಾದ ವಿಭಾಗವನ್ನು ಆಯ್ಕೆ ಮಾಕೊಂಡಿದ್ದು, ತಮ್ಮ ಈ ಮೂರು ವರ್ಷದ ವಿದ್ಯಾರ್ಥಿ ಜೀವನದಲ್ಲಿ ಯಾಂತ್ರಿಕ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ಜೊತೆಗೆ ಪ್ರತಿದಿನದ ಹೆಚ್ಚು ಸಮಯ ಕಾಲೇಜಿನ ಆವರಣದಲ್ಲಿದ್ದು, ಇಲ್ಲಿರುವ ಸೌಲಭ್ಯಗಳ ಸದೂಪಯೋಗ ಮಾಡಿಕೊಳ್ಳಿ ಎಂದರು.

ಕಾಲೇಜಿನ ಅಸೋಶಿಯೆಶನ್ ಆಫ್ ರಾಯಲ್ ಮೆಕ್ಯಾನಿಕಲ್ ಸ್ಟುಡೆಂಟ್ಸ್ ಸಂಯೋಜಕ ಪ್ರೊ. ಪ್ರಸಾದ ರಾಯನ್ನವರ 2021-22 ಶೈಕ್ಷಣಿಕ ವರ್ಷದಲ್ಲಿ ಹಮ್ಮಿಕೊಳ್ಳಲಿರುವ ಚಟುವಟಿಕೆಗಳನ್ನು ವಿವರಿಸಿದರು. ವಿಭಾಗ ಮುಖ್ಯಸ್ಥ ಡಾ. ಆರ್. ಕೆ. ಪಾಟೀಲ, ಪ್ರೊ. ಬಿ. ಎನ್. ಚೌಕಿಮಠ, ಸಚೀನ ಮೆಕ್ಕಳಕಿ, ಮೇಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ  ಭೋದಕ, ಭೊದಕೇತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿವಾನಂದ ವಿಭೂತೆ ಸ್ವಾಗತಗೀತೆ ಹಾಡಿದರು. ವಿಭಾಗ ಮುಖ್ಯಸ್ಥ ಪ್ರೊ. ಕುಮಾರ ಚೌಗಲಾ ಸ್ವಾಗತಿಸಿದರು. ಶಿವಶರಣ ಮೆಂಡಿಗೇರ ಪರಿಚಯಿಸಿದರು. ಅಶ್ವಿನಿ ಗಾಡಿವಡ್ಡರ ಹಾಗೂ ಅಮೀತ ದೇಶಪಾಂಡೆ ನಿರೂಪಿಸಿದರು. ಬಸವರಾಜ ಹುರಕಡ್ಲಿ ವಂದಿಸಿದರು./////

📱 Read Top News, Belgaum News Updates, Belagavi News in Kannada, Latest News on News Belgaum