Belagavi News In Kannada | News Belgaum

ಸಚಿವ ಗೋವಿಂದ ಕಾರಜೋಳ ಕಾರು ಅಪಘಾತ ; ಮುರಿದ ಬೈಕ್ ಸವಾರನ ಕಾಲು

🌐 Belgaum News :

ಬೆಂಗಳೂರು : ಸಚಿವ ಗೋವಿಂದ ಕಾರಜೋಳ ಪ್ರಯಾಣಿಸುತ್ತಿದ್ದ ಕಾರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ.

ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿಯಲ್ಲಿ ಮಹಿಮಾಪುರ ಗೇಟ್ ಬಳಿ ಘಟನೆ ನಡೆದಿದೆ.ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಚಿವ ಗೋವಿಂದ ಕಾರಜೋಳ ಅವರು ತುಮಕೂರಿನಿಂದ ಬೆಂಗಳೂರಿಗೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ  ಘಟನೆ ನಡೆದಿದೆ.ಈ ಕುರಿತು ನೆಲಮಂಗಲ ಟ್ರಾಫಿಕ್ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////

📱 Read Top News, Belgaum News Updates, Belagavi News in Kannada, Latest News on News Belgaum