Belagavi News In Kannada | News Belgaum

ಸಂವಿಧಾನದ ಅರಿವು ನಾಗರಿಕರಿಗೆಲ್ಲರಿಗೂ ಅವಶ್ಯಕ- ತಹಶಿಲ್ದಾರ ಹಾಲಗಿ

🌐 Belgaum News :

ಚನ್ನಮ್ಮನ ಕಿತ್ತೂರು: ಭಾರತದ ಸಂವಿಧಾನದ ಬಗ್ಗೆ ಭಾರತೀಯ ನಾಗರಿಕರೆಲ್ಲರೂ ಅರಿತುಕೊಳ್ಳುವುದು ಅವಶ್ಯಕವಾಗಿದೆ ಎಂದು ಕಿತ್ತೂರು ತಹಶೀಲ್ದಾರ ಹಾಗೂ ತಾಲೂಕು ದಂಡಾಧಿಕಾರಿ ಸೋಮಲಿಂಗಪ್ಪಾ ಹಾಲಗಿ ಹೇಳಿದರು.

ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಧಾರವಾಡ ಹಾಗೂ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ ಸೋಮಲಿಂಗಪ್ಪಾ ಹಾಲಗಿ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದ ಸಂವಿಧಾನವಾಗಿದ್ದು ವಿಶ್ವದ ಅತ್ಯಂತ ದೊಡ್ಡದಾದ ಸಂವಿಧಾನವಾಗಿದೆ. ಇದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯಗಳು ಮತ್ತು ಹಕ್ಕುಗಳನ್ನು ನೀಡುವುದರ ಜೊತೆಗೆ ಪ್ರತಿಯೊಬ್ಬರು ಸಮಾನರು ಎಂದು ನಮಗೆ ತಿಳಿಸಿಕೊಡುತ್ತದೆ.

ಭಾರತ ಸ್ವಾತಂತ್ರ್ಯಗೊಂಡ ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಕರಡು ಸಮಿತಿ ಇದನ್ನು ಸಾಕಷ್ಟು ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ವಿಶ್ವದ ಶ್ರೇಷ್ಠ ಸಂವಿಧಾನವನ್ನು ಪ್ರತಿಯೊಬ್ಬರು ಒಪ್ಪುವ ರೀತಿಯಲ್ಲಿ ರಚಿಸಿ ಭಾರತಕ್ಕೆ ಒಂದು ಶ್ರೇಷ್ಠವಾದ ಸಮಾಜವನ್ನು ಸಮಾನವಾಗಿ ಕಾಣುವ ಸಂವಿಧಾನವನ್ನು ನೀಡಿದ್ದಾರೆ. ಸಂವಿಧಾನದ ಬಗ್ಗೆ ನಾವೆಲ್ಲರೂ ಓದಿಕೊಂಡು ಅದರಂತೆ ನಡೆದು ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.

 

ಭಾರತದ ಸಂವಿಧಾನದ ಪೂರ್ವ ಪೀಠಿಕೆಯನ್ನು ತಹಶೀಲ್ದಾರ ಸೋಮಲಿಂಗಪ್ಪಾ ಹಾಲಗಿ ವಿದ್ಯಾರ್ಥಿಗಳಿಗೆ ಓದಿಸಿದರು.
ಕಿತ್ತೂರಿನ ಹಿರಿಯ ನ್ಯಾಯವಾದಿಗಳು ಹಾಗೂ ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ವ್ಹಿ.ಜಿ.ಬಿಕ್ಕಣ್ಣವರ ವಿಶೇಷ ಉಪನ್ಯಾಸಕರಾಗಿ ಉಪನ್ಯಾಸ ನೀಡುತ್ತಾ ಸಂವಿಧಾನದ ರಚೆನೆಯಲ್ಲಿ ಕರಡು ಸಮಿತಿ ಸಾಕಷ್ಟು ಆಸಕ್ತಿವಹಿಸಿ ಭಾರತಕ್ಕೆ ಯಾವ ರೀತಿ ಸಂವಿಧಾನಬೇಕು ಎಂದು ಚಿಂತಿಸಿ ಎಲ್ಲರೂ ಒಪ್ಪುವಂತಹ ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್.ಅಂಬೇಡ್ಕರವರಿಗೆ ನಾವೆಲ್ಲರೂ ಕೃತಜ್ಞರು. ಸಂವಿಧಾನ ನಮಗೆ ಸಾಕಷ್ಟು ಹಕ್ಕುಗಳನ್ನು ನೀಡಿದ್ದು ಅವುಗಳು ಉಲ್ಲಂಘನೆಗೊಂಡಾಗ ನ್ಯಾಯಾಲಯದ ಮೂಲಕ ನ್ಯಾಯದೊರಕಿಸಿಕೊಳ್ಳುವ ಅಧಿಕಾರವನ್ನು ಸಹ ನಮಗೆ ನೀಡಿದೆ.

 

ಆದರೆ ನಾಗರೀಕರಾದವರು ನಾವು ನಮ್ಮ ಹಕ್ಕುಗಳನ್ನು ಕೇಳುವುದರ ಜೊತೆಗೆ ಸಂವಿಧಾನದಲ್ಲಿ ನಾಗರಿಕರಿಗೆ ಕೆಲವೊಂದು ಕರ್ತವ್ಯಗಳನ್ನು ಸಹ ಪಾಲಿಸಲು ಸೂಚನೆಗಳನ್ನು ನೀಡಿದೆ ಅದರಂತೆ ನಾವೆಲ್ಲರೂ ನಮ್ಮ ಹಕ್ಕುಗಳಿಗಿಂತ ನಮ್ಮ ಕರ್ತವ್ಯಗಳನ್ನು ಜವಾಬ್ದಾರಿಯುತವಾಗಿ ಪಾಲಿಸಿ ನಿರ್ವಹಿಸಿದಾಗ ಭಾರತ ಅಭಿವೃದ್ಧಿ ರಾಷ್ಟ್ರವಾಗಲು ಸಾಧ್ಯ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶೃತಿ ಎಸ್.ಟಿ ನವೆಂಬರ್ 26 ಭಾರತದ ಸಂವಿಧಾನದ ಕರಡು ಪ್ರತಿಯನ್ನು ಅನುಮೋದಿಸಿದ ದಿನವಾಗಿದ್ದು, ಅದರ ನೆನಪಿಗಾಗಿ ಪ್ರತಿ ವರ್ಷವೂ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಆಚರಿಸುತ್ತಿದ್ದು ಭಾರತ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನದ ಬಗ್ಗೆ ಅರಿವು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಸಂವಿಧಾನ ದಿನಾಚರಣೆ ಆಚರಿಸುವುದರಿಂದ ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯವನ್ನು ನಿರ್ವಹಿಸುವ ಜವಾಬ್ದಾರಿಗಳನ್ನು ಎಚ್ಚರಿಸುವ ದಿನವಾಗಿದೆ. ನಮ್ಮ ಸಂವಿಧಾನವನ್ನು ನಾವೆಲ್ಲರೂ ಓದಿ ಅರಿತುಕೊಳ್ಳಬೇಕು ಎಂದು ಹೇಳಿದರು.
ಕಿನಾವಿವ ಸಂಘದ ಗೌರವ ಕಾರ್ಯದರ್ಶಿಗಳಾದ ಜಗದೀಶ ವಸ್ತ್ರದ, ನಿರ್ದೇಶಕರಾದ ಡಿ. ಆರ್. ಪಾಟೀಲ ವೇದಿಕೆಯಲ್ಲಿ ಹಾಜರಿದ್ದರು.
ಸಂವಿಧಾನ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಗೆ ಭಾಷಣ, ಪ್ರಬಂಧ ಲೇಖನ ಹಾಗೂ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

 

ವಿದ್ಯಾರ್ಥಿಗಳು ಸಂವಿಧಾನ ದಿನಾಚರಣೆಯ ಅರಿವು ಮೂಡಿಸಲು ಗದ್ದಿಕರಿವಿನಕೊಪ್ಪದ ಶ್ರೀ ಶಿವನಪ್ಪ ಬಸಪ್ಪ ಚಂದರಗಿ ಹಾಗೂ ಸಂಗಡಿಗರು ಸಂಗೀತ ಮತ್ತು ನಾಟಕ ತಂಡದ ಡೊಳ್ಳು ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಗೃತಿ ಜಾಥಾ ಕೈಗೊಳ್ಳಲಾಯಿತು.

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಡಾ. ಕೆ.ಆರ್.ಮೆಳವಂಕಿ ಸ್ವಾಗತಿಸಿದರು, ಸ್ವಾರಾಗೀನಿ ತಂಡ ನಾಡಗೀತೆ ಹಾಗೂ ಪ್ರಾರ್ಥನಾ ಗೀತೆಯನ್ನು ಹಾಡಿದರು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ವಂದನಾರ್ಪಣೆ ನೆರವೇರಿಸಿದರು. ವಾಣಿಜ್ಯ ಪ್ರಾಧ್ಯಾಪಕಿ ಸಂಗೀತಾ ತೋಲಗಿ ಕಾರ್ಯಕ್ರಮ ನಿರೂಪಿಸಿದರು.

ಪೋಟೊ : 1. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಧಾರವಾಡ ಹಾಗೂ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿದ ಕಿತ್ತೂರು ತಹಶೀಲ್ದಾರ ಹಾಗೂ ತಾಲೂಕು ದಂಡಾಧಿಕಾರಿ ಸೋಮಲಿಂಗಪ್ಪಾ ಹಾಲಗಿ. ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶೃತಿ ಎಸ್.ಟಿ, ಗೌರವ ಕಾರ್ಯದರ್ಶಿಗಳಾದ ಜಗದೀಶ ವಸ್ತ್ರದ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ವ್ಹಿ.ಜಿ.ಬಿಕ್ಕಣ್ಣವರ, ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಇತರರು ಚಿತ್ರದಲ್ಲಿದ್ದಾರೆ.

2. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಧಾರವಾಡ ಹಾಗೂ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿರುವ ಕಿತ್ತೂರು ತಹಶೀಲ್ದಾರ ಹಾಗೂ ತಾಲೂಕು ದಂಡಾಧಿಕಾರಿ ಸೋಮಲಿಂಗಪ್ಪಾ ಹಾಲಗಿ. ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶೃತಿ ಎಸ್.ಟಿ, ಗೌರವ ಕಾರ್ಯದರ್ಶಿಗಳಾದ ಜಗದೀಶ ವಸ್ತ್ರದ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ವ್ಹಿ.ಜಿ.ಬಿಕ್ಕಣ್ಣವರ, ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಇತರರು ಚಿತ್ರದಲ್ಲಿದ್ದಾರೆ.

3. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಧಾರವಾಡ ಹಾಗೂ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಗದ್ದಿಕರಿವಿನಕೊಪ್ಪದ ಶ್ರೀ ಶಿವನಪ್ಪ ಬಸಪ್ಪ ಚಂದರಗಿ ಹಾಗೂ ಸಂಗಡಿಗರು ಸಂಗೀತ ಮತ್ತು ನಾಟಕ ತಂಡದ ಡೊಳ್ಳು ವಾದ್ಯಗಳೊಂದಿಗೆ ಜಾಗೃತಿ ಜಾಥಾ ಕೈಗೊಳ್ಳಲಾಯಿತು.

 

4. ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಧಾರವಾಡ ಹಾಗೂ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳೊಂದಿಗೆ ಕಿತ್ತೂರು ತಹಶೀಲ್ದಾರ ಹಾಗೂ ತಾಲೂಕು ದಂಡಾಧಿಕಾರಿ ಸೋಮಲಿಂಗಪ್ಪಾ ಹಾಲಗಿ. ಕ್ಷೇತ್ರ ಪ್ರಚಾರ ಅಧಿಕಾರಿಗಳಾದ ಶೃತಿ ಎಸ್.ಟಿ, ಗೌರವ ಕಾರ್ಯದರ್ಶಿಗಳಾದ ಜಗದೀಶ ವಸ್ತ್ರದ, ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ವ್ಹಿ.ಜಿ.ಬಿಕ್ಕಣ್ಣವರ, ಪ್ರಾಚಾರ್ಯ ಡಾ. ಜಿ. ಕೆ. ಭೂಮನಗೌಡರ ಇತರರು ಚಿತ್ರದಲ್ಲಿದ್ದಾರೆ.

📱 Read Top News, Belgaum News Updates, Belagavi News in Kannada, Latest News on News Belgaum