Belagavi News In Kannada | News Belgaum

ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಅಳಿಯ

ನೆಲಮಂಗಲ : ಖರ್ಚಿಗೆ ಹಣ ಕೊಟ್ಟಿಲ್ಲವೆಂದು ಅತ್ತೆಯ ಮೇಲೆ ಅಳಿಯ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಬಿಲ್ಲಿನಕೋಟೆ ಗ್ರಾಮದಲ್ಲಿ ನಡೆದಿದೆ.

ಅತ್ತೆ ಸರಸ್ವತಮ್ಮನ ಮೇಲೆ ಅಳಿಯ ಶ್ರೀರಾಮ್ ಎಂಬಾತ ಹಲ್ಲೆ ಮಾಡಿದ್ದಾನೆ. ಗಾಯಾಳು ಸರಸ್ವತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಶ್ರೀರಾಮ್ ವಿರುದ್ಧ ಆತನ ಪತ್ನಿ ಚೈತ್ರಾ ದೂರು ನೀಡಿದ್ದಾರೆ. ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಅಳಿಯ ಶ್ರೀರಾಮ 10 ಸಾವಿರ ರೂಪಾಯಿ ಹಣ ಕೇಳಿದ್ದಕ್ಕೆ 500 ರೂಪಾಯಿ ಕೊಡುವುದಾಗಿ  ಹೇಳಿ, ಇನ್ನೆರಡು ದಿನಗಳಲ್ಲಿ ಸಾವಿರ ರೂಪಾಯಿ ಮನೆಗೆ ಕಳಿಸುವೆ, ಸಧ್ಯಕ್ಕೆ ಹಣವಿಲ್ಲ ಎಂದೂ ಹೇಳಿದ್ದರಂತೆ. ಆಗ ಅತ್ತೆಯ ಮಾತಿನಿಂದ ಕೆರಳಿದ ಅಳಿಯ, ಸಮೀಪದಲ್ಲೇ ಇದ್ದ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಅರೋಪಿ ಪತ್ನಿ ಚೈತ್ರಾ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ./////