Belagavi News In Kannada | News Belgaum

ಯುವ ಕಾಂಗ್ರೆಸ್ ರಾಜ್ಯವಕ್ತಾರರಾಗಿ ಗೋಪಾಲ ದಳವಾಯಿ ಆಯ್ಕೆ

ಬೆಳಗಾವಿ: ರಾಜ್ಯ ವಕ್ತಾರರ ಆಯ್ಕೆಗಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ದಿಂದ ನಡೆಸಿದ #YoungIndiaKeBol ಸ್ಪರ್ಧೆಯಲ್ಲಿ ವಿಜೇತರಾದ ಹಿನ್ನಲೆ  ಗೋಪಾಲ ದಳವಾಯಿರನ್ನು ಯುವ ಕಾಂಗ್ರೆಸ್  ರಾಜ್ಯವಕ್ತಾರರಾಗಿ ಆಯ್ಕೆಮಾಡಿ ಆದೇಶ ಹೊರಡಿಸಲಾಗಿದೆ.

ರಾಷ್ಟ್ರ ಅಭಿವೃದ್ಧಿಗಾಗಿ ಕಾಂಗ್ರೆಸ್  ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳ್ಳಿಸಿ  ದೇಶವನ್ನು ಬದಲಾವಣೆ ಮಾಡುವಲ್ಲಿ ಕಾಂಗ್ರೆಸ್ ಶ್ರಮಿಸಿದೆ ಎಂದು ಪಕ್ಷದ ಸಂದೇಶವನ್ನು ಜನರಿಗೆ ತಲುಪಿಸಿದ್ದಾರೆ.    ಬಿಜೆಪಿ ದುರಾಡಳಿತ ಹಾಗೂ  ಜನ ವಿರೋಧಿ ನಿಲುವನ್ನು ಖಂಡಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ. ಇದೇ ರೀತಿ   ಪಕ್ಷದ ಪರ ಪ್ರಚಾರದಲ್ಲಿ ತೊಡಗಿಕೊಳ್ಳಿ ಎಂದು ಭಾವಿಸಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಕ್ಷಾರಾಮಯ್ಯ ರವರು ಕಾಂಗ್ರೆಸ್  ರಾಜ್ಯವಕ್ತಾರರಾಗಿ ಆಯ್ಕೆ  ಮಾಡಿ ಆದೇಶ ಹೊರಡಿಸಿದ್ದಾರೆ. ಆಯ್ಕೆಯಾದ ಪಕ್ಷದ ವಕ್ತಾರರಿಗೆ  ಶುಭ ಹಾರೈಸಿದ್ದಾರೆ.//////