Belagavi News In Kannada | News Belgaum

ಹಸಮಣೆ ಏರಬೇಕಿದ್ದ ಪೊಲೀಸ್ ಪೇದೆ : ರುಂಡ-ಮುಂಡ ಬೇರೆಯಾದ ಸ್ಥಿತಿಯಲ್ಲಿ ಪತ್ತೆ

ಕಲಬುರಗಿ : ಮುಂದಿನ ವಾರ ಹಸಮಣೆ ಏರಬೇಕಿದ್ದ ಪೊಲೀಸ್ ಪೇದೆ ರೈಲು ಹಳಿ ಮೇಲೆ ರುಂಡ-ಮುಂಡ ಬೇರೆಯಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಾವಳಗಿಯಲ್ಲಿ ನಡೆದಿದೆ.

ಅಫಜಲಪುರ ತಾಲೂಕಿನ ಮದರಾ (ಕೆ) ಗ್ರಾಮದ ನಿವಾಸಿ ಶ್ರೀನಾಥ್ (25) ಶವವಾಗಿ ಪತ್ತೆಯಾದ ಪೊಲೀಸ್​ ಪೇದೆ. ಕ ಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್​ಗೆ ಡಿಸೆಂಬರ್ 1ರಂದು ಮದುವೆ ನಿಶ್ಚಯವಾಗಿತ್ತು. ಆದರೆ  ಮದುವೆಗೆ ನಾಲ್ಕೈದು ದಿನ ಬಾಕಿ ಇರುವಾಗ ಸಾವಳಗಿ ಬಳಿಯ ರೈಲು ಹಳಿಯ ಮೇಲೆ ಶವವಾಗಿ ಬಿದ್ದಿದ್ದಾರೆ.

ಪೇದೆಯ ಸಾವಿನ ಕುರಿತು ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////