Belagavi News In Kannada | News Belgaum

ಆಸ್ತಿ ಕಬಳಿಸಲು ಕಾಗದ ಪತ್ರದ ಮೇಲೆ ಶವದ ಹೆಬ್ಬಟ್ಟು ಒತ್ತಿಸಿಕೊಂಡ ಅಣ್ಣನ ಮಕ್ಕಳು: ವಿಡಿಯೋ ವೈರಲ್

ಮೈಸೂರು : ಸಾವನ್ನಪ್ಪಿದ ವೃದ್ಧೆಯ ಆಸ್ತಿ ಕಬಳಿಸಲು ಆಕೆಯ ಶವದ ಹೆಬ್ಬಟ್ಟನ್ನು ಒತ್ತಿಸಿಕೊಂಡ ವಿಲಕ್ಷಣ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ.

ಆಸ್ತಿ ಕಬಳಿಸಲು ಮೃತ ವ್ಯಕ್ತಿಯ ಹೆಬ್ಬೆಟ್ಟಿನ ಗುರುತನ್ನ ಪಡೆಯುವ ಸನ್ನಿವೇಶಗಳನ್ನ ​ ಸಿನಿಮಾಗಳಲ್ಲಿ ನೋಡಿದ್ದೇವೆ. ಆದ್ರೆ ನಿಜ ಜೀವನದಲ್ಲೂ ಅಂತಹ ಒಂದು ಪ್ರಕರಣ ನಡೆದಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಯಮ್ಮ ಎಂಬ ವೃದ್ದೆಯೊಬ್ಬರು ಮೃತಪಟ್ಟಿದ್ದಾರೆ. ಆಕೆಯ ಅಣ್ಣನ ಮಕ್ಕಳು ಮತ್ತು ಸಂಬಂಧಿಕರು ಖಾಲಿ ಪತ್ರಗಳಿಗೆ ಹೆಬ್ಬೆಟ್ಟಿನ ಮುದ್ರೆ ಒತ್ತಿಸಿಕೊಂಡಿದ್ದಾರೆ.ಈ ಸನ್ನಿವೇಶವನ್ನ ಮಹಿಳೆಯೊಬ್ಬರು ಪ್ರಶ್ನಿಸುತ್ತಾ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಹೆಬ್ಬೆಟ್ಟಿನ ಗುರುತಿರುವ ಪತ್ರಗಳನ್ನ ಪಡೆಯಲು ಮಹಿಳೆ ಯತ್ನಿಸಿದ್ದಾರೆ. ಆದರೆ ಇದಕ್ಕೆ ಕೆಲವರು ವಿರೋಧಿಸಿದ ಬೆನ್ನಲ್ಲೇ ಖಾಲಿ ಪತ್ರಗಳನ್ನ ಪಕ್ಕದಲ್ಲೇ ಇರುವ ತಮ್ಮ ಮನೆಗೆ ರವಾನಿಸಿದ್ದಾರೆ. ಅಲ್ಲದೆ ಇದು ತಪ್ಪು ಎಂದು ವಿರೋಧಿಸಿದ ಮಹಿಳೆ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ./////