Belagavi News In Kannada | News Belgaum

ನೇಕಾರರಿಗೆ ಸಹಾಯಧನ: ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಹಾಗೂ ಆಧಾರ್ ಸಂಖ್ಯೆ ಜೋಡಣೆಗೆ ಸೂಚನೆ

ಬೆಳಗಾವಿ, ನ.28  : ಕೋವಿಡ್-19 ಎರಡನೇ ಅಲೆಯಿಂದಾಗಿ ನೇಕಾರಿಕೆ ವೃತ್ತಿ ಸ್ಥಗಿತಗೊಂಡು ಆರ್ಥಿಕ ಸಂಕಷ್ಟಕ್ಕೊಳಗಾದ ವಿದ್ಯುತ್ ಮಗ್ಗ ನೇಕಾರರಿಗೆ (ಈಗಾಗಲೇ ಅರ್ಜಿ ಸಲ್ಲಿಸಿದ ನೇಕಾರರಿಗೆ) ತಲಾ ರೂ.3,000/- ಗಳು ಮಂಜೂರಾಗಿದ್ದು, ಅದರಲ್ಲಿ ಆಧಾರ ಎನ್.ಪಿ.ಸಿ.ಐ ಗೆ ಸೀಡ್ / ಮ್ಯಾಪಿಂಗ್ (ಜೋಡಣೆ) ಆಗಿರುವ 19,342 ನೇಕಾರರಿಗೆ ಮಾತ್ರ ನೇರವಾಗಿ ಡಿ.ಬಿ.ಟಿ ಮೂಲಕ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ.
ಆಧಾರನ್ನು ಎನ್.ಪಿ.ಸಿ.ಐ ಗೆ ಸೀಡ್ / ಮ್ಯಾಪಿಂಗ್ (ಜೋಡಣೆ) ಮಾಡಿಕೊಳ್ಳದ ಹಾಗೂ ಕಳೆದ 3 ತಿಂಗಳಿನಿಂದ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸದೇ ಇನ್-ಆಕ್ಟಿವ್ ಆಗಿರುವ ಮತ್ತು ತಮ್ಮ ಆಧಾರನಲ್ಲಿರುವ ಹೆಸರು ಮತ್ತು ವಿಳಾಸದಲ್ಲಿ ಬದಲಾವಣೆ / ಅಪ್‍ಡೆಟ್ ಮಾಡಿಕೊಂಡಿರುವ 2377 ನೇಕಾರರಿಗೆ ತಲಾ ರೂ.3,000/- ಮಂಜೂರಾಗಿದ್ದರೂ ಸಹ ಬ್ಯಾಂಕ್ ಖಾತೆಯಲ್ಲಿ ಜಮೆ ಆಗಿರುವುದಿಲ್ಲ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಆಧಾರನ್ನು ಎನ್.ಪಿ.ಸಿ.ಐ ಗೆ ಸೀಡ್ / ಮ್ಯಾಪಿಂಗ್ (ಜೋಡಣೆ) ಮಾಡಿಕೊಳ್ಳದ ಹಾಗೂ ಕಳೆದ 3 ತಿಂಗಳಿನಿಂದ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಸದೇ ಇನ್-ಆಕ್ಟಿವ್ ಆಗಿರುವಂತಹ ನೇಕಾರರು ಒಂದು ವಾರದೊಳಗಾಗಿ ತಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕಿಗೆ ಖುದ್ದಾಗಿ ಸಂಪರ್ಕಿಸಿ ಆಧಾರ ಸಂಖ್ಯೆಯನ್ನು ಡಿ.ಬಿ.ಟಿ ಸಲುವಾಗಿ ಎನ್.ಪಿ.ಸಿ.ಐ ಗೆ ಸಿಡಿಂಗ್ / ಮ್ಯಾಪಿಂಗ್ (ಜೋಡಣೆ) ಮಾಡಲು ಹಾಗೂ ಖಾತೆಯನ್ನು ವಹಿವಾಟಿನೊಂದಿಗೆ ಚಾಲ್ತಿಯಲ್ಲಿಡಲು ಕೋರಲಾಗಿದೆ.
ಆಧಾರನಲ್ಲಿರುವ ಹೆಸರು, ದೂರವಾಣಿ ಸಂಖ್ಯೆ ಮತ್ತು ವಿಳಾಸದಲ್ಲಿ ಬದಲಾವಣೆ / ಅಪ್‍ಡೆಟ್ ಮಾಡಿಕೊಂಡಿರುವ ಫಲಾನುಭವಿಗಳು ಆಧಾರ ವೆಬ್‍ಸೈಟ್‍ನಿಂದ ತಮ್ಮ ಇ-ಆಧಾರ ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಂಡು ದಿನಾಂಕ 04-12-2021 ರ ಒಳಗಾಗಿ ಉಪ ನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಅನಗೋಳ, ಬೆಳಗಾವಿ-590006 ಕಛೇರಿಗೆ ಸಲ್ಲಿಸಲು ಕೋರಲಾಗಿದೆ. ತಪ್ಪಿದಲ್ಲಿ ಮಂಜೂರಾಗಿರುವ ಮೊತ್ತವು ಸ್ವಯಂಚಾಲಿತವಾಗಿ ತಿರಸ್ಕøತವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆ: 0831-2950674 ಗೆ ಸಂಪರ್ಕಿಸಲು ತಿಳಿಸಿದೆ.