Belagavi News In Kannada | News Belgaum

ಮಾನವೀಯತೆಯನ್ನೆ ಮರೆತ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಭಾಗ 2

ಮಾನವೀಯತೆಯನ್ನೆ ಮರೆತ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ

ಬಾಗ 2

ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಅನ್ನುತ್ತಾರೆ ಕಷ್ಟದ ಕಾಲದಲ್ಲಿ ಜೀವಗಳ ರಕ್ಷಣೆ ಮಾಡುವ ಮನುಷ್ಯ ರೂಪದ ದೇವರೆಂದು ವೈದ್ಯಕೀಯ ಸಿಬ್ಬಂದಿಯನ್ನು ಕರೆಯುತ್ತಾರೆ.ಕೊರೊನಾ ಸಂಕಷ್ಟದ ಸಮಯದಲ್ಲಿ ಅಕ್ಷರಶಃ ದೇವರು ಅನ್ನಿಸಿಕೊಂಡ ಅಥಣಿ ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಯ ಅಸಲಿಯತ್ತು ಮತ್ತೆ ಹೊರಬರುತ್ತಿದೆ.

ಅಥಣಿ ತಾಲ್ಲೂಕು ಆಸ್ಪತ್ರೆಯಲ್ಲಿ ರವಿವಾರ ಹೆರಿಗೆಗೆ ಬಂದಿದ್ದ ಮಹಿಳೆಗೆ ಚಿಕಿತ್ಸೆ ಸಿಗದೆ ನಮ್ಮಲ್ಲಿ ವೈದ್ಯರು ಯಾರೂ ಇಲ್ಲ ಬೇಕಿದ್ದರೆ ಮಿರಜ್ ಆಸ್ಪತ್ರೆಗೆ ಬರೆದುಕೊಡುತ್ತೇವೆ ಎಂದು ಹೇಳಿರುವ ಸಿಬ್ಬಂದಿ ಗರ್ಬಿಣಿ ಮಹಿಳೆಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದು ಸದ್ಯ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

 

ರವಿವಾರ ರಜೆ ಇದೆ ಯಾವ ವೈದ್ಯರೂ ಬಂದಿಲ್ಲ ಎಂದು ಹೇಳಿದ್ದಲ್ಲದೆ ನಮ್ಮಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಲು ಆಗುವದಿಲ್ಲ ಮಗು ಉಳಿಸಿಕೊಳ್ಳಬೇಕಾದರೆ ಖಾಸಗಿ ಆಸ್ಪತ್ರೆಗೆ ಹೋಗಿ ಎಂದು ಹೇಳಿದ್ದು ಮಾನವೀಯತೆ ಮರೆತು ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಹಿಂದೆ ಸೀಜರ್ ಮಾಡುವ ಸಮಯದಲ್ಲಿ ಆಪರೇಷನ್ ಸ್ಟೀಚ್ ಟ್ಯಾಗ್,ಅನಸ್ತೇಸಿಯಾ,ಹೆಸರಿನಲ್ಲಿ ಹಣ ಪೀಕುತ್ತಿದ್ದ ಸಿಬ್ಬಂದಿ ವರದಿಗಳು ಬಿತ್ತರವಾಗುತ್ತಿದ್ದಂತೆಯೆ ಬಳ್ಳಿಗೇರಿ ಮೂಲದ ಗರ್ಬಿಣಿ ಮಹಿಳೆಗೆ ಚಿಕಿತ್ಸೆ ನಿರಾಕರಿಸಿದ್ದು

 

ಈ ಮೊದಲು ಹೆರಿಗೆ ವಿಭಾಗದಲ್ಲಿ ಸರಿಯಾಗಿ ಕರ್ತವ್ಯ ನೀರ್ವಹಿಸದ ಸಿಬ್ಬಂದಿಯನ್ನು ಬೇರೆ ವಿಭಾಗಕ್ಕೆ ಹಾಕಿದ್ದರೂ ಬುದ್ದಿ ಕಲಿಯದ ಉಳಿದ ಸಿಬ್ಬಂದಿ ಮನಸಿಗೆ ಬಂದಂತೆ ವರ್ತಿಸುತ್ತಿರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ,ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಸೇರಿದಂತೆ ಹಲವರು ಆಕ್ಸಿಜನ್ ಪ್ಲಾಂಟ್,ಅಂಬುಲೆನ್ಸ,ವೆಂಟಿಲೆಟರ್ ಸೇರಿದಂತೆ ಹತ್ತು ಹಲವು ಅನುಕೂಲಗಳನ್ನು ಕಲ್ಪಿಸಿಕೊಡುತ್ತಿದ್ದರೂ ಕೂಡ ಸಿಬ್ಬಂದಿಯ ಸೇವಾ ಮನೋಭಾವದ ಕೊರತೆ ಮತ್ತು ಸಿಬ್ಬಂದಿಯ ಮೇಲೆ ಹಿಡಿತ ತಪ್ಪಿದ ವೈದ್ಯಾಧಿಕಾರಿಗಳ ಅಸಡ್ಡೆ ಮತ್ತು ವೈದ್ಯರ ನಿರ್ಲಕ್ಷದಿಂದ ದಿನವೂ ಒಂದಲ್ಲ ಒಂದು ಗಂಭೀರ ಆರೋಪಗಳು ಕೇಳಿ ಬರುತ್ತಿವೆ.

 

ಸದ್ಯ ಇಲ್ಲಿನ ಕೆಲವು ಸಿಬ್ಬಂದಿ ಮನಸಿಗೆ ಬಂದಂತೆ ವರ್ತಿಸುತ್ತಿದ್ದು ಬೇಕಾಬಿಟ್ಟಿ ರಜೆ,ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರದೆ ಇರುವದು ಸೇರಿದಂತೆ ಹಲವು ಅಚಾತುರ್ಯಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಯಸಿ ಬರುವ ಬಡ ಜನರ ಸಿಟ್ಟು ದವಡೆಗೆ ಮೂಲ ಎಂಬಂತಾಗಿದ್ದು ಇದಕ್ಕೆಲ್ಲ ಕಡಿವಾಣ ಯಾವಾಗ ಅನ್ನುವ ಪ್ರಶ್ನೆ ಉದ್ಭವವಾಗಿದೆ.

 

ಅಥಣಿ ತಾಲೂಕಿನ ಬಹುತೇಕ ಗ್ರಾಮೀಣ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಕೂಡ ತಾಲ್ಲೂಕು ಆಸ್ಪತ್ರೆ ಅವ್ಯವಸ್ಥೆ ಕಂಡು ತಮಗೆ ತಳಿದಂತೆ ವರ್ತಿಸುತ್ತಾರೆ ಎನ್ನುವ ಆರೋಪಗಳ ನಡುವೆ ಹಲವು ವರದಿಗಳು ಶ್ವಾನ ಬೊಗಳಿದರೆನು ಸ್ವರ್ಗಕ್ಕೆ ಕಿಚ್ಚು ಹತ್ತುವದೆ ಎಂಬಂತೆ ವರ್ತಿಸುತ್ತಿರುವ ತಪ್ಪಿತಸ್ಥ ಸಿಬ್ಬಂದಿಯ ಮೇಲೆ ಶಿಸ್ತು ಕ್ರಮ ಜರುಗಿಸುವದರ ಜೊತೆಗೆ ಆಶಾ ಕಾರ್ಯಕರ್ತೆಯರ ಮೂಲಕ ಗರ್ಬಿಣಿ ಮಹಿಳೆಯ ಪೋಷಕರಿಂದ ಹಣ ಪಡೆಯುತ್ತಾರೆ ಎಂಬ ಆರೋಪ ಬಂದರೂ ಕೂಡ ಸಾಕ್ಷಿಗಳನ್ನು ಮುಚ್ಚಿಹಾಕಲು ಆಡಳಿತ ಸಿಬ್ಬಂದಿ ಮುಂದಾಗುವ ಮೂಲಕ ಪರೋಕ್ಷವಾಗಿ ಬೆನ್ನಿಗೆ ನಿಲ್ಲುತ್ತಿದ್ದು ಹಲವು ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ನೋಡಿ ಮೇಲಾಧಿಕಾರಿಗಳು ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯದ ವೇಳೆ ತಪ್ಪು ಮಾಡಿದ ಸಿಬ್ಬಂದಿಗೆ ಕಾಟಾಚಾರಕ್ಕೆ ಮೆಮೊ ಕೊಟ್ಟು ಅವರಿಂದ ಲಿಖಿತ ಉತ್ತರ ಪಡೆದು ಕೈತೊಳೆದುಕೊಳ್ಳುತ್ತಿರುವದು ಮತ್ತಷ್ಟು ನಿರ್ಲಕ್ಷ್ಯ ಹಾಗೂ ಅಸಡ್ಡೆಗೆ ದಾರಿ ಮಾಡಿ ಕೊಟ್ಟಂತೆ ಆಗುತ್ತಿದೆ ಎಂದು ನೊಂದ ಜನರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಇನ್ನಾದರೂ ಸಮಯಕ್ಕೆ ಸರಿಯಾಗಿ ಬರದ,ಜನರಿಗೆ ಸರಿಯಾಗಿ ಚಿಕಿತ್ಸೆ ಕೊಡದ,ಸಾರ್ವಜನಿಕ ಸೇವೆಯಲ್ಲಿ ಇದ್ದು ನಯವಿನಯದಿಂದ ಮಾತನಾಡದ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸುವ ಮೂಲಕ ಸರ್ಕಾರಿ ಆಸ್ಪತ್ರೆಯನ್ನು ಬಡವರ ಪಾಲಿನ ಸಂಜೀವಿನಿ ಆಗಿಸಲು ಬೆಳಗಾವಿ ಜಿಲ್ಲಾಡಳಿತ ಮುಂದಾಗುತ್ತಾ ಅಂತ ಕಾಯ್ದು ನೋಡಬೇಕಾಗಿದೆ.