Belagavi News In Kannada | News Belgaum

ನಾಗನೂರು ಶಿವಬಸವ ಶ್ರೀಗಳ 132 ನೇಯ ಜಯಂತಿ ಮಹೋತ್ಸವ ಡಿ 5 ರಿಂದ 8 ರವರೆಗೆ

 

ಬೆಳಗಾವಿ : ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ 132 ನೇಯ ಜಯಂತಿ ಮಹೋತ್ಸವವು ಡಿಸೆಂಬರ್ 5 ರಿಂದ 8 ರ ವರೆಗೆ ಬೆಳಗಾವಿಯ ಶಿವಬಸವನಗರದಲ್ಲಿರುವ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಜರುಗಲಿದೆ .

ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಡಾ. ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಲಿರುವ 4ದಿನಗಳ ಕಾರ್ಯಕ್ರಮದ ನೇತೃತ್ವವನ್ನು ನಾಗನೂರು ರುದ್ರಾಕ್ಷಿಮಠದ ಪೀಠಾಧೀಶರಾದ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ವಹಿಸಲಿದ್ದಾರೆ .
ರವಿವಾರ ದಿನಾಂಕ ಐದರಂದು ಬೆಳಗಿನ ಒಂಭತ್ತೂವರೆ ಗಂಟೆಗೆ ಶ್ರೀಮಠದ ಆವರಣದಲ್ಲಿ ಷಟಸ್ಥಳ ಧ್ವಜಾರೋಹಣ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ .

ರವಿವಾರ ದಿ.5 ರಂದು ಸಂಜೆ 5-30 ಗಂಟೆಗೆ ಅಥಣಿಯ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ .ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ .ಅಥಣಿ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು ನೇತೃತ್ವ ವಹಿಸಲಿದ್ದಾರೆ . ಡಾ .ವಿ ಎಸ್ ಮಾಳಿ ಗ್ರಂಥ ಪರಿಚಯ ಮಾಡಲಿದ್ದಾರೆ ,ಮುಖ್ಯ ಅತಿಥಿಗಳಾಗಿ ಮೈಸೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಶ್ರೀ ವಿಲಾಸ್ ಕಾರ್ ಜಿನ್ನಿ ,ಡಾ. ಬಸವರಾಜ ಜಗಜಂಪಿ ,ಡಾ. ಸರಜೂ ಕಾಟ್ಕರ್ ಆಗಮಿಸಲಿದ್ದು ಇದೇ ಸಂದರ್ಭದಲ್ಲಿ ಶ್ರೀ ಸಾಗರ್ ಬೋರ್ಗಲ್ ಬೆಳಗಾವಿ ಮತ್ತು ಶ್ರೀ ಶಂಕರ ಬಾಗೇವಾಡಿ ಕಣಬರಗಿ ಇವರುಗಳಿಗೆ ” ಕನ್ನಡ ನುಡಿ ಶ್ರೀ ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು .

ಸೋಮವಾರ ದಿನಾಂಕ 6 ರಂದು ಸಂಜೆ ಐದೂವರೆ ಗಂಟೆಗೆ ಶ್ರೀ ಮಠದ ಹಳೆಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ” ಆತ್ಮ ಸ್ವಾಸ್ಥ್ಯ ಶ್ರೀ” ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗದುಗಿನ ಶ್ರೀ ಜಗದ್ಗುರು ಶಿವಾನಂದ ಮಠದ ಶ್ರಿ? ಜಗದ್ಗುರು ಶ್ರೀ ಶಿವಾನಂದ ಮಹಾಸ್ವಾಮಿಗಳ ಸಾನಿಧ್ಯದಲಿ ,ಬೆಳಗಾವಿಯ ಕಾರಂಜಿಮಠದ ಶ್ರೀ ಗುರುಸಿದ್ದ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಸಾದ ನಿಲಯಗಳ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪೆÇ್ರ ಎಂ ಆರ್ ಉಳ್ಳೇಗಡ್ಡಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸ್ಮಾರ್ಟ್ ಸಿಟಿ ಬೆಳಗಾವಿಯ ಕಾರ್ಯನಿರ್ವಾಹಕ ಅಭಿಯಂತ ಪಿ ಎಂ ಪಾಟೀಲ ಆಗಮಿಸಲಿದ್ದಾರೆ .

ಬೆಂಗಳೂರಿನ ಅಂತಾರಾಷ್ಟ್ರೀಯ ಮಕ್ಕಳ ಹೃದಯ ರೋಗ ತಜ್ಞೆ ಡಾ ವಿಜಯಲಕ್ಷ್ಮಿ ಈಶ್ವರಪ್ಪ ಬಾಳೆಕುಂದ್ರಿ ಅವರಿಗೆ ” ಆತ್ಮ ಸ್ವಾಸ್ಥ್ಯ ಶ್ರೀ” ಪ್ರಶಸ್ತಿ ನೀಡಲಾಗುವದು ಅದೇ ರೀತಿ ಅಶೋಕ ಮಳಗಲಿ, ಬಿ .ಎ.ಪಾಟೀಲ, ಶಶಿಧರ್ ಬಗಲಿ ,ಅನಂತ ಕುಲಕರ್ಣಿ ಹಾಗೂ ಡಾ. ಗುರುದೇವಿ ಹುಲೆಪ್ಪನವರಮಠ ಇವರುಗಳಿಗೆ ಶ್ರಿ?ಮಠದಿಂದ ” ಪ್ರಸಾದ ಶ್ರಿ? ” ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ .

ಕೊನೆಯದಾಗಿ ಶ್ರೀಮತಿ ಜ್ಯೋತಿ ಬದಾಮಿ ಅವರ ಪರಿಕ್ರಮ ಕೈಲಾಸ ಮಾನಸ ಮಡಿಲಲ್ಲಿ ಎಂಬ ಗ್ರಂಥದ ಲೋಕಾರ್ಪಣೆ ನಡೆಯಲಿದೆ .
ಮಂಗಳವಾರ ದಿನಾಂಕ 7 ರಂದು ಸಂಜೆ 5-30 ಗಂಟೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಸನ್ಮಾನ ಕಾರ್ಯಕ್ರಮ ಭಾಲ್ಕಿ ಸಂಸ್ಥಾನ ಹಿರೇಮಠದ ಬಸವಲಿಂಗ ಪಟ್ಟದ್ದೆ?ವರ ಸಾನ್ನಿಧ್ಯದಲ್ಲಿ ಜರುಗಲಿದೆ .ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯ ಅಜ್ಜನವರ ನೇತೃತ್ವದಲ್ಲಿ ಜರುಗಲಿರುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಡಾ ರಾಮಚಂದ್ರ ಗೌಡ ,ವಿಶ್ವೆ?ಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ. ಬಿ .ಈ. ರಂಗಸ್ವಾಮಿ ಆಗಮಿಸಲಿದ್ದಾರೆ .

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಥಣಿಯ ಬಿ.ಎಲ. ಪಾಟೀಲ್ ಬೀಳಗಿಯ ಸಿದ್ದಪ್ಪ ಬಿದರಿ ಆದಿಚುಂಚನಗಿರಿಯ ಡಾ ಜಿ ಎನ್ ರಾಮಕೃಷ್ಣೇಗೌಡ ಮತ್ತು ವಿಜಯಪುರದ ಡಾ ಕೃಷ್ಣ ಕೊಲ್ಹಾರ ಕುಲಕರ್ಣಿ ಓವರುಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ .

ಬುಧವಾರ ದಿನಾಂಕ 8 ರಂದು ಮುಂಜಾನೆ 10-30 ಗಂಟೆಗೆ ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳವರ ಪುತ್ಥಳಿ ಅನಾವರಣ ಹಾಗೂ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ಸಿರಿಗೆರೆಯ ಶ್ರಿ? ಜಗದ್ಗುರು ತರಳಬಾಳು ಮಹಾಸಂಸ್ಥಾನ ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಗದುಗಿನ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಹಾಗೂ ಹಾಲಕೆರೆಯ ಅನ್ನದಾನೀಶ್ವರ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿಗಳವರ ನೇತ್ರತ್ವದಲ್ಲಿ ಜರುಗಲಿದೆ .ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸರ್ಕಾರದ ಕಲ್ಲಿದ್ದಲು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ವಹಿಸಲಿದ್ದಾರೆ .

 

ಕರ್ನಾಟಕದ ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಅವರು ” ಶಿವಬಸವ ಚಿತ್ರ ಸಂಪುಟ ” ವನ್ನು ಲೋಕಾರ್ಪಣೆಗೆuಟಿಜeಜಿiಟಿeಜಳಿಸಲಿದ್ದಾರೆ .ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಗಿರೀಶ ಹೊಸೂರ ಆಗಮಿಸಿಲಿದ್ದಾರೆ .ಇದೇ ಸಂದರ್ಭದಲ್ಲಿ ಧಾರವಾಡದ ಡಾ ಗುರುಲಿಂಗ ಕಾಪ್ಸೆ ಕಲ್ಬುರ್ಗಿಯ ಶ್ರೀಮತಿ ವಿಲಾಸವತಿ ಖೂಬಾ ವಿಜಯಪುರದ ಎನ್ ಕೆ ಕುಂಬಾರ ,ಧಾರವಾಡದ ಸಿ ಆರ್ ಯರವಿನ ತೆಲಿಮಠ ಗದುಗಿನ ಚನ್ನಯ್ಯ ಹಿರೇಮಠ ಹಾಗೂ ಬೆಳಗಾವಿಯ ಅಶೋಕ ಚಂದರಗಿ ಇವರುಗಳಿಗೆ ಶ್ರೀಮಠದಿಂದ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು .

ಅದೇ ರೀತಿ ಮಿರಜ್ ನ ವಿಜಯ್ ಗುಜ್ಜರ್ ಶಿರಸಿಯ ಆರ್ ಎಮ್ ಹೆಗ್ಡೆ ಮತ್ತು ಬೆಳಗಾವಿಯ ಮಹೇಶ ಹೆಬ್ಬಾಳೆ ಅವರುಗಳಿಗೆ ಗೌರವ ಸನ್ಮಾನ ನೀಡಲಾಗುತ್ತಿದೆ .
ಬುಧುವಾರ ಸಂಜೆ ಬೆಳಗಾವಿ ಸಮೀಪದ ಬಸವನ ಕುರ್ಚಿಯಲ್ಲಿರುವ ಶ್ರೀಮತಿ ಚನ್ನಮ್ಮ ಹಿರೇಮಠ ವೃದ್ಧಾಶ್ರಮದ ಆವರಣದಲ್ಲಿ ಪೂಜ್ಯ ಡಾ.ಶಿವಬಸವ ಮಹಾಸ್ವಾಮಿಗಳವರ ಪುತ್ಥಳಿ ಅನಾವರಣ ನಡೆಯಲಿದೆ .ಕಾರ್ಯಕ್ರಮದಲ್ಲಿ ಎಂ ಎಸ್ ಚೌಗ್ಲಾ ಉಪಸ್ಥಿತರಿರಲಿದ್ದಾರೆ .