Belagavi News In Kannada | News Belgaum

ನಿಷ್ಠಾವಂತ, ಪ್ರಾಮಾಣಿಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ ವಿಶ್ವಾಸ ಇಟ್ಟು ಮತ ನೀಡಿ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ನಿಷ್ಠಾವಂತ, ಪ್ರಾಮಾಣಿಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ ವಿಶ್ವಾಸ ಇಟ್ಟು ಮತ ನೀಡಿ  ಇನ್ನೂ ಕಾಲಾವಕಾಶವಿದೆ ಚನ್ನರಾಜ್ ಹಟ್ಟಿಹೊಳಿ ಬಹುಮತ ಅಂತರದಿಂದ ವಿಜಯಶಾಲಿಯಾಗಲು ಪ್ರಯತ್ನಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಬೆಳಗಾವಿ: “ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ವಿರೋಧ ಪಕ್ಷಗಳು ಅಪ್ರಚಾರ ಮಾಡುತ್ತಿವೆ.

 

ನಿಷ್ಠಾವಂತ, ಪ್ರಾಮಾಣಿಕ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ ವಿಶ್ವಾಸ ಇಟ್ಟು ಮತ ನೀಡಿ. ಅಭಿವೃದ್ಧಿ ಮಾಡುವ ಜಬಾವ್ದಾರಿ ನಮಗೆ ಬೀಡಿ. ಗ್ರಾಮಗಳ ಅಭಿವೃದ್ಧಿ ಮುಖ್ಯ, ಭಾಷಣವಲ್ಲ ಎಂದು ” ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಟಾಂಗ್ ಕೊಟ್ಟರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ವಿಧಾನಪರಿಷತ್ ಚುನಾವಣೆಯ ಪ್ರಚಾರಾರ್ಥವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಮ ಪಂಚಾಯ್ತಿ ಚುನಾಯಿತ ಜನಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು, ಬಿಜೆಪಿಯವರದ್ದು ಬರೀ ಭಾಷಣವಾಯಿತು, ಅಭಿವೃದ್ಧಿ ಮಾತ್ರ ಶೂನ್ಯ ಎಂದರು.

 

ಜನರ ವಿಶ್ವಾಸ ಉಳಿಸಿಕೊಳ್ಳಬೇಕು: ಜನರಿಗೆ ನೀಡುವ ವಿಶ್ವಾಸ, ಭರವಸೆಯನ್ನು ಯಾವುದೇ ಸರ್ಕಾರ ಇದ್ದರೂ ಉಳಿಸಿಕೊಳ್ಳಬೇಕಿದೆ. ಗೆಲುವುವರೆಗೂ ನೂರು(100) ಭಾರೀ ಭೇಟಿ ನೀಡುವವರು, ಗೆಲ್ಲುವಿನ ಬಳಿಕ 5 ವರ್ಷದಲ್ಲಿ ಮೂರು(3) ಭಾರೀಯೂ ಮುಖ ತೋರಿಸಲಾರರು ಎಂದು ಕಿಡಿಕಾರಿದರು.

 

ಮೂರು ವರ್ಷದಲ್ಲಿ ಮೂರು ಗಂಭೀರ ಆಂತಕಗಳನ್ನು ಈ ಭಾಗದ ಜನರು ಅನುಭವಿಸಿದ್ದಾರೆ. ಆದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಕಣ್ಣಿರು ವರಿಸಲಿಲ್ಲ. ಪ್ರವಾಹದಿಂದ ಸಾವಿರೂ ಜನರು ಬೀದಿ ಪಾಲಾಗಿದರೂ ಅವಾಗಲೂ ಬಿಜೆಪಿಯವರೂ ಜನರಿಗೆ ಮುಖ ತೋರಿಸಲಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ದಂಡು ಬೆಳಗಾವಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಬಡಜನರ ಪ್ರತಿಯೊಂದು ಸಂಕಷ್ಟದಲ್ಲಿ ಬೆನ್ನಿಗೆ ನಿಂತಿದೆ. ಇದನ್ನು ಮನಗಂಡು ಕಾಂಗ್ರೆಸ್ ಬೆಂಬಲಿಸಿ ಎಂದರು ಮನವಿ ಮಾಡಿಕೊಂಡು.

 

ಇನ್ನೂ ಕಾಲಾವಕಾಶ ಇದೆ. ಗ್ರಾಪಂ ಸದಸ್ಯರ ವಿಶ್ವಾಸ ಪಡೆದುಕೊಂಡು ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ನೀಡಲು ತಿಳಿಸಬೇಕು. ಈ ಚುನಾವಣೆ ಗೆಲುವು ಸಾಧಿಸುವುದು ನಿಜ, ಆದರೂ ಬಹು ಅಂತರದಿಂದ ನಮ್ಮ ಅಭ್ಯರ್ಥಿ ವಿಜಯಶಾಲಿಯಾಗಬೇಕು ಎನ್ನವುದು ನಮ್ಮ ಗುರಿ ಇದೆ ಎಂದು ಹೇಳಿದರು.

 

ಶಾಸಕರಾದ ಮಾಹಾತೇಂಶ ಕೌಜಲಗಿ, ಎನ್ಎ ಹ್ಯಾರೀಸ್, ಲಕ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಎ.ಎನ್. ಹ್ಯಾರಿಶ್, ಮಾಜಿ ಸಚಿವ ವೀರಕುಮಾರ್ ಪಾಟೀಲ್ , ಡಿಬಿ ಇನಾಮರಾದ್ ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ್ , ಪೀರೋಜ್ ಸೇಠ , ಶಾಹಾಜಾನ್ ಡೋಂಗರಗಾವ್ ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ವಿಶ್ವಾಸ ವೈದ್ಯ, ಅರವಿಂದ ದಳವಾಯಿ, ಗಜಾನನ ಮಂಗಸೂಳಿ, ಎಸ್ .ಬಿ.ಘಾಟಗೆ, ಮಹಾವೀರ ಮೋಹಿತೆ, ರಾಜು ಸೇಠ, ವಿನಯ ನಾವಲಗಟ್ಟಿ, ಲಕ್ಷಣರಾವ್ ಚಿಂಗಳೆ ಹಾಗೂ ಇತರರು ಇದ್ದರು.