Belagavi News In Kannada | News Belgaum

ಬ್ಲ್ಯಾಕ್ ಮೇಲರ್ ಗೆ ಹೆದರಿಕೊಂಡು ಸರ್ಕಾರ ನಡೆಸುತ್ತಾರೆ, ಬಿಜೆಪಿಗೆ ತಿವಿದ ಡಿಕೆ ಶಿವಕುಮಾರ್

ಕಾಂಗ್ರೆಸ್ ಗೆಲುವು ಪಕ್ಕಾ, ಹೆಚ್ಚು ಸೀಟು ಕಾಂಗ್ರೆಸ್ ಪಾಲು: ಡಿಕೆಶಿ ವಿಶ್ವಾಸ

 

ಬೆಳಗಾವಿ: “ಬಿಜೆಪಿ ಸಂಸ್ಕೃತಿಯ ಪ್ರತಿಬಿಂಬ , ಬಿಜೆಪಿಯಲ್ಲಿ ಶೇ 50 ರಷ್ಟು ಹೆಣ್ಣು ಮಕ್ಕಳಿದ್ದಾರೆ. ಸಂಸ್ಕೃತಿ, ಸಂಸ್ಕಾರ ಇರುವಂತ ಪಕ್ಷ ಎಂಬುವುದು ಬೊಬ್ಬೆಹೊಡೆಯುತ್ತಾರೆ ಹೇಗೆ. ಅದಕ್ಕೆ, ಕೇಂದ್ರ ಕೃಷಿ ಮಂತ್ರಿ ಶೋಭಾ ಕಂರದ್ಲಾಜೆ, ಯಡಿಯೂರಪ್ಪ, ಸಿಎಂ ಬೊಮ್ಮಾಯಿ, ಕಟೀಲ, ಉತ್ತರ ಕೊಡಲಿ ಎಂದು” ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಡಳಿತ ಪಕ್ಷದ ಮುಂಖಡರಿಗೆ ತಿವಿದರು.

 

ಬ್ಲ್ಯಾಕ್ ಮೇಲರ್ ಹೆದರಿಕೊಂಡು ಸರ್ಕಾರ ನಡೆಸುತ್ತಾರೆ:-

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಮಹಿಳಾ ಶಾಸಕಿಗೆ ಥೂ.. ಥೂ…! ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಶಿಸ್ತು ಮತ್ತು ಸ್ವಾಭಿಮಾನ ಪಕ್ಷ ಎನ್ನುವುದು ಕೇಳಿದ್ದೆನೆ. ಶಿಸ್ತಿನ ಪಕ್ಷದಲ್ಲಿ ಬ್ಲಾಕ್ ಮೇಲ್ ರಗಳು ಇದ್ದಾರೆ. ಅದು ಜನರಿಗೂ ಗೊತ್ತು. ಬಿಜೆಪಿ ಈ ಮಟ್ಟಕ್ಕೆ ಬಂದಿರುವುದು ನನಗೆ ಬಹಳ ಸಂತೋಷವಾಗಿದೆ . ಬ್ಲ್ಯಾಕ್ ಮೇಲರ್ಸ್ ಗೆ ಹೆದರಿಕೊಂಡು ಬಿಜೆಪಿ ಸರ್ಕಾರ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿ ಆಗಿದ್ದರೆ ಅಂತವರನ್ನು ಒಂದು ಗಂಟೆನೂ ಪಕ್ಷದಲ್ಲಿರಲು ಕಾಲಾವಕಾಶ ನೀಡುತ್ತಿರಲಿಲ್ಲ ಎಂದು ಬಿಜೆಪಿಗೆ ಚಾಟಿ ಬಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಮಾಜಿ ರಮೇಶ ಜಾರಕಿಹೊಳಿ ಅವರ ಶಪಥಗೆ ಪ್ರತಿಕ್ರಿಯಿಸಿದ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮಾತನಾಡಲಿ, ಗ್ರಾಪಂ ಸದಸ್ಯರು ದಡ್ಡರೇ ಗ್ರಾಮೀಣದಿಂದ ತಕ್ಕ ಉತ್ತರ ಸಿಗಲಿದೆ ಎಂದರು.

 

ಕಾಂಗ್ರೆಸ್ ಗೆಲುವು ಪಕ್ಕಾ: ಡಿಕೆಶಿ ವಿಶ್ವಾಸ
ಪರಿಷತ್ ಚುನಾವಣೆ ಚುನಾವಣೆ ಗೆಲ್ಲುವಿನೊಂದಿಗೆ ಹೆಚ್ಚು ಸೀಟಗಳು ನಮ್ಮ ಪಾಲಾಗಲಿವೆ. ಸಂಪೂರ್ಣ ವಿಶ್ವಾಸ ನನಗಿದೆ. ರಾಜ್ಯದ ಜನರು ಬದಲಾವಣೆ ಬಯಿಸಿದ್ದಾರೆ. ‘ಜೆ ಎಚ್ ಪಟೇಲ್ ಅವರ ಕಾಲಾವಧಿಯಲ್ಲಿ ಗ್ರಾಪಂ ಅಭಿವೃದ್ಧಿಗೆ 1 ಲಕ್ಷ ರೂ.ಅನುದಾನ ಇತ್ತು. ಮಾಜಿ ಸಿಎಂ ಎಸ್ ಎಂ ಕೃಷ್ಣಾ ಅವರು ಹೆಚ್ಚುವರಿವಾಗಿ 5 ಲಕ್ಷ ರೂ. ಮಾಡಿದ್ದರು. ಪಂಚಾಯತ್ ರಾಜ್ ಇಲಾಖೆಗೆ ಶಕ್ತಿ ತುಂಬಿದರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಗ್ರಾಪಂಗಳಿಗೆ ಅನುದಾನ ಬಿಡುಗಡೆ ಮಾಡಿ, ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದ. ಬಳಿಕ ಗ್ರಾಮೀಣ ಪ್ರದೇಶಗಳು ಸಾಕಷ್ಟು ಬದಲಾವಣೆ ಆಗಿವೆ.

ಗ್ರಾಪಂ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ:

ಯುಪಿ ಸರ್ಕಾರ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನರೇಗಾ ಯೋಜನೆ ತಂದ ಬಳಿಕ, ದೇಶದ ಗ್ರಾಮೀಣ ಬಡಜನತೆಗೆ ದುಡಿಯಲು ತುಂಬಾ ಅನುಕೂಲವಾಗಿದೆ. ಅವರ ಮಾಡಿದ ಫಲದಿಂದ ಇಂದು ಒಂದು ಗ್ರಾಪಂಗೆ 2-3 ಕೋಟಿ ರೂ. ಅನುದಾನ ಈಗಲೂ ಬಿಡುಗಡೆಯಾಗುತ್ತೆ. ನರೇಗಾ ಯೋಜನೆಯಲ್ಲಿ ಲಕ್ಷಾಂತರ ಬಡಜನತೆ ಜೀವನೋಪಾಯ ನಡೆಸುತ್ತಾರೆ ಇದೇಲ್ಲ ನರೇಗಾ ಕಾರ್ಯಕ್ರಮವಾಗಿದೆ.

ಇವುವೆಲ್ಲವೂ ಕಾಂಗ್ರೆಸ್ ಯೋಜನೆ ಎನ್ನುವುದು ಗ್ರಾಪಂ ಸದಸ್ಯರು ಮನಗಂಡಿದ್ದಾರೆ. ಜನ ಸೇವೆ ಮಾಡಲು ಈ ಯೋಜನೆಗಳು ಸಹಕಾರಿಯಾಗಿವೆ. ಈಗಿರುವ ಸದಸ್ಯರು ಪ್ರಜ್ಞಾವಂತರೂ, ವಿದ್ಯಾವಂತರೂ, ತುಂಬಾ ತಿಳುವಳಿಕೆ ಅವರಲ್ಲಿದೇ. ಬದಲಾವಣೆ ಬಯಿಸಿದ್ದಾರೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಜನಪರ ಯೋಜನೆಗಳು ಆಗಿಲ್ಲ ಎನ್ನವುದು ಸದಸ್ಯರಿಗೆ ಅರಿವಾಗಿದೆ ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪನವರು ಜನತಾದಳದ ಬೆಂಬಲ ಕೇಳಿದ್ದಾರೆ. ಜತೆಗೆ ಜನತಾದಳದವರು ಬೆಂಬಲ ಸೂಚಿಸುವಂತೆ ಸಿಎಂ ಬೊಮ್ಮಾಯಿ ಅವರು ಮನವಿ ಮಾಡಿಕೊಂಡಿರುವ ಮಾಹಿತಿ ಇದೆ ಎಂದರು.

 

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಮಾಹಾತೇಂಶ ಕೌಜಲಗಿ, ಎನ್ಎ ಹ್ಯಾರೀಸ್, ಲಕ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಎ.ಎನ್. ಹ್ಯಾರಿಶ್, ಮಾಜಿ ಸಚಿವ ವೀರಕುಮಾರ್ ಪಾಟೀಲ್ , ಡಿಬಿ ಇನಾಮರಾದ್ ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ್ , ಪೀರೋಜ್ ಸೇಠ , ಶಾಹಾಜಾನ್ ಡೋಂಗರಗಾವ್ ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ವಿಶ್ವಾಸ ವೈದ್ಯ, ಅರವಿಂದ ದಳವಾಯಿ, ಗಜಾನನ ಮಂಗಸೂಳಿ, ಎಸ್ .ಬಿ.ಘಾಟಗೆ, ಮಹಾವೀರ ಮೋಹಿತೆ, ರಾಜು ಸೇಠ, ವಿನಯ ನಾವಲಗಟ್ಟಿ, ಲಕ್ಷಣರಾವ್ ಚಿಂಗಳೆ ಹಾಗೂ ಇತರರು ಇದ್ದರು.