Belagavi News In Kannada | News Belgaum

ಡಿಸೆಂಬರ್ 2ರಂದು ಬೆಳಗಾವಿಗೆ ಸ್ಪೀಕರ್ ಆಗಮನ

ಸ್ವಯಂ ಪ್ರೇರಿತ ಕೋವಿಡ್ ಟೆಸ್ಟ್ ಮಾಡಿಕೊಳ್ಳಿ: ಡಿಸಿ ಆರ್. ವೆಂಕಟೇಶ್‍ಕುಮಾರ್

ಬೆಳಗಾವಿ: ಹೊರ ಜಿಲ್ಲೆಗಳಿಂದ ಬಂದವರು, ಮದುವೆ ಸೇರಿ ಇನ್ನಿತರ ಕಾರ್ಯಕ್ರಮಗಳಿಗೆ ಹೋಗಿ ಬಂದರೆ ಸೋಂಕು ಹರಡುವ ಸಾಧ್ಯತೆಯಿದೆ. ಹೀಗಾಗಿ ಈ ರೀತಿ ಹೊರಗಡೆ ಹೋಗಿ ಬಂದವರು ಸ್ವಯಂಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್‍ಕುಮಾರ್ ತಿಳಿಸಿದರು.

 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇನ್ನು ಹೊಸ ತಳಿ ಒಮಿಕ್ರಾನ್‍ಗೆ ಸಂಬಂಧಿಸಿದಂತೆ ಯಾವುದೇ ಸ್ಯಾಂಪಲ್ಸಗಳನ್ನು ನಾವು ಕಳಿಸಿಲ್ಲ. ಸರ್ಕಾರದಿಂದ ಬಂದ ಮಾರ್ಗಸೂಚಿ ಪ್ರಕಾರ ಹೊರ ದೇಶಗಳಿಂದ ಬರುವ ಜನರಿಗೆ ಪಾಸಿಟಿವ್ ಬಂದರೆ, ಅಂತವರ ಸ್ಯಾಂಪಲ್‍ನ್ನು ಜಿನೋಮ್ ಸೀಕ್ವೆನ್ಸ ಲ್ಯಾಬೋಟರಿಗೆ ಕಳಿಸುವಂತೆ ತಿಳಿಸಲಾಗಿದೆ. ಆದ್ದರಿಂದ ವಿದೇಶದಿಂದ ಬಂದ ಯಾರಿಗಾದ್ರೂ ಸೋಂಕು ಕಾಣಿಸಿಕೊಂಡರೆ ಅವರ ಸ್ಯಾಂಪಲ್‍ನ್ನು ಬೆಂಗಳೂರಿಗೆ ಕಳಿಸಿಕೊಡುತ್ತೇವೆ ಎಂದರು.

 

ಇನ್ನು ಈಗಾಗಲೇ ಬೆಳಗಾವಿ ಜಿಲ್ಲೆಯ ಶೇ. 95ರಷ್ಟು ಜನರು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಅದೇ ರೀತಿ ಶೇ. 88ರಷ್ಟು ಜನ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 17ರಂದು ಬೆಳಗಾವಿ ಜಿಲ್ಲೆಯಲ್ಲಿ ಒಂದೇ ದಿನ 3 ಲಕ್ಷ ಲಸಿಕೆ ನೀಡಲಾಗಿತ್ತು. ಅದೇ ರೀತಿ ಮುಂದಿನ ತಿಂಗಳು ಮತ್ತೆ ಒಂದೇ ದಿನ 3 ಲಕ್ಷ ಲಸಿಕೆ ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

 

ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿಗಳು, ಡಿಸೆಂಬರ್ 2ರಂದು ಬೆಳಗಾವಿಗೆ ಸ್ಪೀಕರ್ ಅವರು ಆಗಮಿಸುತ್ತಿದ್ದಾರೆ. ಈ ವೇಳೆ ಅವರ ಜೊತೆಗೆ ಒಂದು ಸಭೆ ಕೂಡ ಇದೆ. ಸರ್ಕಾರದ ಮಾರ್ಗಸೂಚಿಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚೆ ಮಾಡಲಾಗುವುದು. ಸ್ಯಾನಿಟೈಸ್, ಮಾಸ್ಕ ಸೇರಿದಂತೆ ಇನ್ನಿತರ ಮುನ್ನೆಚ್ಚರಿಕಾ ಕ್ರಮ ಈಗಾಗಲೇ ನಾವು ಕೈಗೊಂಡಿದ್ದೇವೆ. ಆದರೆ ಆರ್‍ಟಿಪಿಸಿಆರ್ ರಿಪೋರ್ಟ ಸೇರಿದಂತೆ ವಿಚಾರಗಳ ಬಗ್ಗೆ ಸ್ಪೀಕರ್ ಅವರ ಜೊತೆಗೆ ಚರ್ಚಿಸುತ್ತೇವೆ ಎಂದರು.