Belagavi News In Kannada | News Belgaum

ಸರಳ, ಸಜ್ಜನ, ವ್ಯಕ್ತಿ ಈರಣ್ಣ ಮದವಾಲ: ಜಯದೇವರಾಜೆ ಈರಣ್ಣ ಮದವಾಲರಿಗೆ ಸನ್ಮಾನ ಕಾರ್ಯಕ್ರಮ

 

ಬೆಳಗಾವಿ: ಸರಳ, ಸಜ್ಜನ, ನಿμÁ್ಠವಂತ ವ್ಯಕ್ತಿ ಈರಣ್ಣ ಮದವಾಲ. ಇವರು ಹುಟ್ಟು ಸಾವು ಬದುಕಿಗೆ ಅರ್ಥವನ್ನು ಕಲ್ಪಿಸಿಕೊಟ್ಟಂತ ವ್ಯಕ್ತಿ ಹೇಳಬಹುದು ಎಂದು ಮಹಾಪ್ರಧಾನ ಕಾರ್ಯದರ್ಶಿ ಜಯದೇವರಾಜೆ ಅರಸ ಅವರು ಅಭಿಪ್ರಾಯಪಟ್ಟರು.

 

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳ ನಿ. ಬೆಂಗಳೂರು, ವಾಕರಸಾ ಸಂಸ್ಥೆ ಪ.ಜಾತಿ/ಪ.ಪಂಗಡಗಳ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘ ನಿ. ಬೆಳಗಾವಿ, ಅಲ್ಪಸಂಖ್ಯಾತರ ಹಾಗೂ ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘ ನಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಅ.ಕ.ರಾ.ರ.ಸಾ.ನೌ.ಮ.ಮಂಡಳಿ, ಬೆಂಗಳೂರು ಸಾರಿಗೆ ಸಂಸ್ಥೆಯಿಂದ ಡಾ.ಕೆ.ಎಸ್.ಶರ್ಮಾ ಅವರ ಅಧ್ಯಕ್ಷತೆಯಲ್ಲಿ ರವಿವಾರ(ನ.28) ರಂದು ನಗರದ ಮಹಾಂತೇಶ ನಗರದಲ್ಲಿ ಮಹಾಂತ ಭವನದಲ್ಲಿ ನಡೆದ ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕರಾದ ಈರಣ್ಣ ಮದವಾಲ ಅವರಿಗೆ ಸೇವಾ ನಿವೃತ್ತಿ ನಿಮಿತ್ಯ ಅಭಿನಂದನ ಸಮಾರಂಭ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

 

ನಾಡಿನ ಕ್ಷೇತ್ರಕ್ಕೆ ಅನೇಕ ನಾಯಕರನ್ನು ಕೊಟ್ಟಂತಹ ವಿಶೇಷ ಬೆಳಗಾವಿ ವಿಭಾಗ. ಅವರಲ್ಲಿ ಈರಣ್ಣ ಮದವಾಲ ಕೂಡ ಅ.ಕ.ರಾ.ರ.ಸಾ.ನೌ.ಮ.ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ ಎಂದರು. ನಾವು ಎಲ್ಲರೂ ಒಂದಾಗಿರಬೇಕೆಂದು ಈರಣ್ಣ ಮದವಾಲ ಅವರು ತೊರಿಸಕೊಟ್ಟಿದ್ದಾರೆ. ಅμÉ್ಟೀ ಅಲ್ಲದೆ ಇಂತಹ ಮಹಾನವ್ಯಕ್ತಿಗೆ ನಾಲ್ಕು ಸಂಘಟನೆಗಳ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಗುತ್ತಿದೆ.

 

ಅವರು ಅಧಿಕಾರಸಲ್ಲಿದ್ದಾಗ ಕೂಡ ಅಭಿವೃದ್ಧಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ನಂತರ ನಿವೃತ್ತಿಯಾದ ಬಳಿಕ ರಾಜಕೀಯದಲ್ಲೂ ಮುಂಚೂಣಿಯಲ್ಲಿದ್ದಾರೆ. ಅμÉ್ಟೀ ಅಲ್ಲದೆ ಜೀವನದ್ದೂಕ್ಕು ಎಲ್ಲರ ಜೊತೆಗೆ ಒಂದಾಗಿ ಬದುವಕ ಕಲೆಯನ್ನು ಕಲಿತುಕೊಂಡಿದ್ದಾರೆ. ಹುಟ್ಟು ಸಾವು ಖಚಿತ. ಆದರೆ ಹುಟ್ಟು ಸಾವು ಬದುಕಿಗೆ ಅರ್ಥವನ್ನು ಕಲ್ಪಿಸಿಕೊಟ್ಟಂತ ವ್ಯಕ್ತಿ ಈರಣ್ಣ ಮದವಾಲ. ಮದವಾಲ ಕುಟುಂಬಕ್ಕೆ ಐಶ್ವರ್ಯ, ನೆಮ್ಮದಿ ಕೊಡಲಿ ಎಂದು ಅಭಿನಂದನೆ ಹೇಳಿದರು.

 

ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಮಾತನಾಡಿ, ಈರಣ್ಣ ಮದವಾಲ ಅವರು ಸಂಘಟನೆಗಳಲ್ಲಿ ಭಾಗಿಯಾಗಿ ಯಾವುದೇ ಸಮಸ್ಯೆಗಳ ಬಗೆಹರಿಸಲು ಸತತ ಪ್ರಯತ್ನದಲ್ಲಿದ್ದಾರೆ. ಅವರು ನಿವೃತ್ತಿ ಆಗಿದ್ದರು ಕೂಡಾ ಸಮಾಜ ಸೇವೆಗಾಗಿ ಹೆಜ್ಜೆ ಇಡುತ್ತಿದ್ದಾರೆ. ಆದ್ದರಿಂದ ಅವರ ಮುಂದಿನ ವಿಶ್ರಾಂತಿ ಜೀವನ ಸುಖಮಯವಾಗಲಿ ಹಾಗೂ ಅವರು ಕುಟುಂಬಕ್ಕೆ ಇನ್ನೂ ಹೆಚ್ಚಿನ ಶಕ್ತಿ ನೀಡಲಿ. ಜೊತೆಗೆ ಸಂಘಟನೆಯಲ್ಲಿದ್ದು ಹೆಚ್ಚಿನ ಕೆಲಸ ಮಾಡಲಿ ಎಂದು ಹೇಳಿದರು.

 

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ
ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕರಾದ ಈರಣ್ಣ ಮದವಾಲ ಅವರು, ವಿಶಾಲವಾದ ಹೇಗೆ ಸಮುದ್ರ ಇದೇ ಅದೇ ರೀತಿ ನಮ್ಮ ಸಾರಿಗೆ ಸಂಸ್ಥೆಗೆ ವಿಶಾಲತೆಯಿದೆ. ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸುತ್ತದೆ ಎಂದರು. ಇನ್ನು 1984 ರಲ್ಲಿ ತಾವು ಸಾರಿಗೆ ಸಂಸ್ಥೆಗೆ ಸೇರಿದ ಪೂರ್ವದಿಂದ ಮತ್ತು ಪ್ರಸ್ತುತ ದಿನಗಳಲ್ಲಿರುವ ವ್ಯವಸ್ಥೆ ಬಗ್ಗೆ ಅನುಭವ ಹೇಳಿದರು.

 

ಕಾರ್ಯಕ್ರಮ ವೇದಿಕೆಯಲ್ಲಿ ಶಾಸಕ ಅನಿಲ ಬೆನಕೆ, ಮಹಾನಗರ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಪ್ರಧಾನ ಕಾರ್ಯದರ್ಶಿ ಜಿ.ಪ್ರಕಾಶಮೂರ್ತಿ, ಕೋಶಾಧ್ಯಕ್ಷ ಎನ್.ಆರ್.ದೇವರಾಜೆ ಅರಸ, ಅಧ್ಯಕ್ಷ ಎಸ್.ಆರ್.ಅದರಗುಂಚಿ, ರಾಜು ಪನ್ಯಾಗೋಳ, ಡಿ.ಎನ್.ಕಾಂಬಳೆ, ಮಹಬೂಬ ಮುಲ್ಲಾ, ಮಲ್ಲಿಕ ಯರಗಟ್ಟಿ, ಎಂ.ಜಿ.ಬಿಳ್ಳೂರ ಉಪಸ್ಥಿತರಿದ್ದರು.

 

ಅಶ್ವಿನಿ ಹಿರೇಮಠ ಪ್ರಾರ್ಥಿಸಿದರು. ಸಂಜೆಯ ರಾಜೇಶ್ ನಿರೂಪಿಸಿದರು. ಹರೀಶ್ ಚಲವಾದಿ ಅವರು ವಂದಿಸಿದರು. ಪ್ರಾರಂಭದಲ್ಲಿ ಜಿ.ಎಸ್.ಕಾಳೆ, ರಾಜು ಪಣ್ಯಾಗೋಳ ಇವರು ರಸಮಂಜರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈರಣ್ಣ ಮದವಾಲರಿಗೆ ಸನ್ಮಾನ

ಪ.ಜಾತಿ/ಪ.ಪಂಗಡಗಳ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘ ನಿ. ಬೆಳಗಾವಿ, ಅಲ್ಪಸಂಖ್ಯಾತರ ಹಾಗೂ ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘ, ವಾ.ಕ.ರ.ಸಾ ಬೆಳಗಾವಿ 1, 2, 3, 4 ಘಟಕ, ಬೈಲಹೊಂಗಲ, ರಾಮದುರ್ಗ, ಸವದತ್ತಿ ನೌಕರರು ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ವಿವಿಧ ಘಟಕ ಮತ್ತು ಸಂಘಟನೆಗಳಿಂದ ನಿವೃತ್ತ ಸಹಾಯಕ ಸಂಚಾರ ನಿರೀಕ್ಷಕರಾದ ಈರಣ್ಣ ಮದವಾಲ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.