Belagavi News In Kannada | News Belgaum

ಓಮಿಕ್ರಾನ್‌ ಅತ್ಯಂತ ಅಪಾಯಕಾರಿ ರೂಪಾಂತರಿಯಲ್ಲ, ಅಧ್ಯಯನದ ಅವಶ್ಯವಿದೆ ದ.ಆಫ್ರಿಕಾ ವೈದ್ಯೆ

ದೆಹಲಿ:ಕೊರೋನಾ ಎರಡನೇಯ ಅಲೆಗಿಂತ ಓಮಿಕ್ರಾನ್‌ ಅತ್ಯಂತ ಅಪಾಯಕಾರಿ ರೂಪಾಂತರಿಯಲ್ಲ,   ಅಧ್ಯಯನದ ಅವಶ್ಯವಿದೆ ದ.ಆಫ್ರಿಕಾ ವೈದ್ಯೆ ತಿಳಿಸಿದ್ದಾರೆ.

ಕೊರೋನಾದ ಹೊಸ ರೂಪಾಂತರಿ ಓಮಿಕ್ರಾನ್‌ ನೆಮ್ಮದಿಯಾಗಿದ್ದ ಜನರ ನಿದ್ದೆ ಕೆಡಿಸಿದೆ. ಓಮಿಕ್ರಾನ್‌ ದಕ್ಷಿಣ ಆಫ್ರಿಕಾದ ಹಲವು ಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಎಲ್ಲೆಡೆ ವ್ಯಾಪಕವಾಗಿ ಸೋಂಕು ಹರಡುತ್ತಿದೆ. ಆರೋಗ್ಯ, ಆರ್ಥಿಕ ಚಟುವಟಿಗಳಿಗಲ್ಲಿ ಈಗಿನ್ನೂ ಚೇತರಿಕೆ ಕಾಣುತ್ತಿರುವ ದೇಶಗಳಲ್ಲಿ ಓಮಿಕ್ರಾನ್‌ ಭೀತಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವು ರಾಷ್ಟ್ರಗಳು ದಕ್ಷಿಣ ಆಫ್ರಿಕಾದಿಂದ ಆಗಮಿಸುವವರ ಮೇಲೆ ನಿರ್ಬಂಧ ಹೇರಿವೆ.
ಇಷ್ಟಾದರೂ ಕೂಡ ಓಮಿಕ್ರಾನ್‌ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಓಮಿಕ್ರಾನ್‌ನ ಬಗ್ಗೆ ದಕ್ಷಿಣ ಆಫ್ರಿಕಾ ವೈದ್ಯಕೀಯ ಸಂಘದ ಮುಖ್ಯಸ್ಥೆ ಏಂಜಲಿಕ್‌ ಬಗ್ಗೆ ಮಾತನಾಡಿದ್ದಾರೆ. ಏಂಜಲಿಕ್‌ ಅವರು ಸ್ವತಃ ವೈದ್ಯೆಯಾಗಿದ್ದು, ಹತ್ತು ದಿನಗಳಿಂದ 30 ಓಮಿಕ್ರಾನ್‌ ಸೋಂಕು ಬಾಧಿತರಿಗೆ ಚಿಕಿತ್ಸೆ ನೀಡಿದ್ದಾರೆ. 30 ರಲ್ಲಿ 10 ಮಂದಿ ಈಗಾಗಲೇ ಸಂಪೂರ್ಣ ಗುಣವಾಗಿದ್ದು, ತಮ್ಮ ಮನೆಗಳಿಗೆ ತೆರಳಿದ್ದಾರೆ. ಇನ್ನುಳಿದವರಿಗೂ ಸೌಮ್ಯ ಲಕ್ಷಣಗಳಿದ್ದು, ಶೀಘ್ರವೇ ಗುಣಮುಖರಾಗಲಿದ್ದಾರೆ ಎಂದಿದ್ದಾರೆ.
ಈ ೩೦ರಲ್ಲಿ ಅರ್ಧದಷ್ಟು ಮಂದಿ ಲಸಿಕೆಯನ್ನೇ ಪಡೆದಿರಲಿಲ್ಲ. ಓಮಿಕ್ರಾನ್‌ ಸೋಂಕು ಕಾಣಿಸಿಕೊಂಡವರಿಗೆ ಅಪರಿಚಿತ ಲಕ್ಷಣಗಳು ಕಾಣಿಸುತ್ತವೆ. ಯಾರಿಗೆ ಯಾವ ರೀತಿ ಲಕ್ಷಣಗಳು ಕಾಣುತ್ತವೆ ಎಂದು ಹೇಳುವುದು ಕಷ್ಟ. ಆದರೆ ಎಲ್ಲ ಲಕ್ಷಣಗಳು ಸೌಮ್ಯವಾಗಿರಲಿವೆ. ಕೆಲವರಿಗೆ ಗಂಟಲು ಕೆರೆತ, ಒಣಕೆಮ್ಮು ಮತ್ತು ಮೈ ಕೈ ನೋವು ಕಾಣಿಸಿತ್ತು. ಇನ್ನೂ ಹಲವರಿಗೆ ಜ್ವರ ಮಾತ್ರ ಕಾಣಿಸಿದೆ ಎಂದಿದ್ದಾರೆ.
ಓಮಿಕ್ರಾನ್‌ ಅತ್ಯಂತ ಅಪಾಯಕಾರಿ ವೈರಸ್‌ ಎಂದು ಎಲ್ಲೆಡೆ ಹೇಳಲಾಗುತ್ತಿದೆ. ಆದರೆ ಇದು ನಾವಂದುಕೊಂಡಷ್ಟು ಅಪಾಯಕಾರಿ ಅಲ್ಲ. ಇದರ ಬಗ್ಗೆ ಸಾಕಷ್ಟು ಅಧ್ಯಯನ ಅವಶ್ಯ ಇದೆ. ಅಧ್ಯಯನಕ್ಕೂ ಮುನ್ನ ಅನಾವಶ್ಯಕವಾಗಿ ಸುದ್ದಿ ಹರಡುವುದು ಅಥವಾ ಭಯಭೀತರಾಗುವುದು ಸರಿಯಲ್ಲ. ಜ್ವರದಿಂದ ಮೃತಪಡದಿದ್ದರೂ ಜ್ವರ ಬಂದರೆ ನಾವು ಸಾಯುತ್ತೇವೆ ಎಂದು ಹೆದರುವ ಮಂದಿ ಹೆಚ್ಚಾಗಿ ಬೇಗ ಗುಣಮುಖವಾಗುವುದಿಲ್ಲ ಎಂದಿದ್ದಾರೆ.