Belagavi News In Kannada | News Belgaum

ಸೈಕ್ಲೋನ್ ಹೊಡೆತ ನಗುಲಿದ ರಾಜ್ಯ: ಮೂರು ದಿನ ರಾಜ್ಯದಲ್ಲಿ ರೆಡ್ ಅಲರ್ಟ್

ಬೆಂಗಳೂರು:  ಕಳೆದ ಎರಡ್ಮೂರು ದಿನಗಳಿಂದ ಬ್ರೇಕ್ ನೀಡಿದ್ದ ಮಳೆ  ಮತ್ತೆ ರಾಜ್ಯದಲ್ಲಿ ಮಳೆಯಾಗಲಿದೆ.  ಇಂದಿನಿಂದ ಮುಂದಿನ ಎರಡು ದಿನ ರಾಜ್ಯದಲ್ಲಿ ಮಳೆಯಾಗಲಿದ್ದು, ಎಲ್ಲ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ಸಹ ನೀಡಲಾಗಿದೆ.

ಮತ್ತೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿರುವ ಪರಿಣಾಮ ಮೊದಲು ತಮಿಳುನಾಡಿನರಾಜಧಾನಿ ಚೆನ್ನೈ  ಎದುರಿಸಲಿದೆ. ನಂತರ ಕರ್ನಾಟಕದ ಮೈಸೂರು ಭಾಗ ಸಹ ಸೈಕ್ಲೋನ್ ಗೆ ಒಳಪಡಲಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗದಲ್ಲಿ ಮಳೆಯಾಗಲಿದೆ ಎಂದು ಹಮಾಮಾನ ಇಲಾಖೆ ಹೇಳಿದೆ.

ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾ ಗಲಿದೆ. ಶಿವಮೊಗ್ಗ, ಹಾಸನ. ದಾವಣಗೆರೆ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಇನ್ನುಳಿದಂತೆ ಚಳಿ  ಸಹ ರಾಜ್ಯದಲ್ಲಿ   ಆರಂಭವಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಚಳಿ ಮತ್ತು ಸುಳಿ ಗಾಳಿಯ ಜೊತೆ ಒಣ ಹವೆ ಇರಲಿದೆ.

ಜಿಲ್ಲಾವಾರು ಹವಾಮಾನ ವರದಿ

ಬೆಂಗಳೂರು 26-19, ಮಂಗಳೂರು 31-24, ಚಿಕ್ಕಬಳ್ಳಾಪುರ 24-17, ಕೋಲಾರ 26-19, ಮೈಸೂರು 27-19, ರಾಮನಗರ 28-20, ಮಂಡ್ಯ 28-19, ಚಾಮರಾಜನಗರ 27-20, ಹಾಸನ 27-18, ಚಿಕ್ಕಮಗಳೂರು 27-17, ದಾವಣಗೆರೆ 31-19, ಬೀದರ್ 30-17, ಕಲಬುರಗಿ 32-18, ರಾಯಚೂರು 31-19, ಬಾಗಲಕೋಟೆ 32-18, ವಿಜಯಪುರ 31-18, ಬೆಳಗಾವಿ 30-17, ಧಾರವಾಡ 30-18, ಹಾವೇರಿ 31-18, ಕೊಪ್ಪಳ 31-19, ಗದಗ 31-18, ಹಾವೇರಿ 31-18, ಚಿತ್ರದುರ್ಗ 29-18, ಮತ್ತು ಬಳ್ಳಾರಿ 31-19

ಈ ಸೈಕ್ಲೋನ್ ಮಳೆ ಬೆಂಗಳೂರು, ಮೈಸೂರು ಭಾಗ ಮತ್ತು ಉಡುಪಿಯವರೆಗೆ ಸುರಿಯಲಿದೆ. ಮುಂಜಾಗ್ರತ ಕ್ರಮಗಳೊಂದಿಗೆ ಸಿದ್ಧರಾಗಿರುವಂತೆ ಹೇಳಲಾಗಿದೆ. ಡಿಸೆಂಬರ್ 2ರ ನಂತರ ಮತ್ತೊಮ್ಮೆ ಮಳೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಮಾಹಿತಿ ದೃಢಪಟ್ಟಿಲ್ಲ ಎಂದು ಆರ್ ಅಶೋಕ ತಿಳಿಸಿದ್ದಾರೆ.

ಬೆಳೆ ಹಾನಿಗೆ ಪರಿಹಾರ ನೀಡುವ ಭರವಸೆ
ಮಳೆ ಹಾನಿ ಕುರಿತು ವರದಿ ಪಡೆಯಲಾಗುತ್ತಿದೆ. ಕೇವಲ ರಾಗಿ ಬೆಳೆಗಾರರಿಗೆ ಮಾತ್ರ ಪರಿಹಾರ ನೀಡಲಾಗುತ್ತೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಬೆಳೆ ಹಾನಿಗೆ ಒಳಗಾದ ಎಲ್ಲರಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಚಿವ ಅಶೋಕ್ ಭರವಸೆ ನೀಡಿದರು.