Belagavi News In Kannada | News Belgaum

ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶಕ್ತಿ ತುಂಬಿ: ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ ಜಾರಕಿಹೊಳಿ

ಯಮಕನಮರಡಿ:  ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿರುವ ಯಮಕನಮರಡಿ  ಕ್ಷೇತ್ರ  ಈ ಬಾರೀ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಲಿದ್ದು, ಗ್ರಾಪಂ ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಕ್ಕೆ  ಶಕ್ತಿ ತುಂಬಬೇಕಾಗಿದೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

 

ಸಮೀಪದ  ಅಲದಾಳ ಗೆಸ್ಟ್ ಹೌಸ್ ನಲ್ಲಿ ಮಂಗಳವಾರ ಆಯೋಜಿಸಿದ್ದ, ದಡ್ಡಿ ಜಿಲ್ಲಾ ಪಂಚಾಯತ್  ವ್ಯಾಪ್ತಿಯ ಗ್ರಾಪಂ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರ ಸಭೆಯಲ್ಲಿ ಕಾಂಗ್ರೆಸ್  ಅಭ್ಯರ್ಥಿ ಪರ ಮತಯಾಚನೆ ಮಾಡಿ, ಅವರು  ಮಾತನಾಡಿದರು.

ಇದೇ ಡಿ.10 ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್  ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರು ಸ್ಪರ್ಧಿಸಿದ್ದಾರೆ. ವಿದ್ಯಾವಂತ ಯುವಕರಾಗಿರುವ  ಇವರಿಗೆ ಪ್ರಥಮ ಪ್ರಾಶಸ್ತ್ಯ ಮತಯನ್ನು ನೀಡಿ,  ಗೆಲ್ಲಿಸುವಂತೆ ಮತದಾರರಲ್ಲಿ ಮನವಿ  ಮಾಡಿಕೊಂಡರು.

ಈ ಬಾರೀ ವಿಧಾನ ಪರಿಷತ್ ಚುನಾವಣೆಯಲ್ಲಿ  ಕಾಂಗ್ರೆಸ್  ಅಭ್ಯರ್ಥಿಗೆ  ಪ್ರಾಶಸ್ತ್ಯ ಮತ ನೀಡುವುದರ ಮೂಲಕ ಕಾಂಗ್ರೆಸ್ ವನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೇ, ಈ ಜಯದ ಶ್ರೇಯಸ್ಸು ನಿಮಗೂ ಸಲ್ಲುತ್ತದೆ. ರಾಜ್ಯದಲ್ಲಿ ಯಮಕನಮರಡಿ ಕ್ಷೇತ್ರಕ್ಕೂ ಸಲ್ಲುತ್ತದೆ ಎಂದರು.

ಈ ಸಂದರ್ಭದಲ್ಲಿ ಸುರೇಶ ಬೆಣ್ಣಿ, ರಮೇಶ ಪಾಟೀಲ್ , ಮಹಾನಿಂಗ ಶಿರಗುಪ್ಪಿ, ಅರ್ಜುನ ಗಸ್ತಿ, ಬಾಳೇಶ ಮಾವನುರಿ, ಬಸವರಾಜ ದೇಸಾಯಿ, ಅಶೋಕ ತಳವಾರ, ಪ್ರಮೋದ ರಗಶೆಟ್ಟಿ, ಸಂಜು ಮಡಲಗಿ, ಶಿವಾಜಿ ಕವಳಿಕಟ್ಟಿ, ತಾನಾಜಿ ಸುಂಟೆಕರ್ , ಶರದ ಪಾಟೀಲ್ , ಶರದ ಪ್ರದಾನ, ದಯಾನಂದ ಪಾಟೀಲ್ , ಕಿರಣ ರಜಪೂತ್ ಹಾಗೂ ಇತರರು ಇದ್ದರು./////