Belagavi News In Kannada | News Belgaum

ವಿಧಾನಪರಿಷತ್ ಸದಸ್ಯರಾದ ಶ್ರೀ ಲಕ್ಷ್ಮಣ್ ಸವದಿ, ಶಾಸಕರಾದ ಶ್ರೀ ಮಹೇಶ್ ಕುಮಟಳ್ಳಿ, ಸಭೆ ನಡೆಸಿ ಮತ ಯಾಚನೆ

ಅಥಣಿ : ವಿಧಾನ  ಪರಿಷತ್ ಚುನಾವಣೆ  ಅಥಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವಂತಹ ಐಗಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಕೊಕಟನೂರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷರು , ತೆಲಸಂಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿ ಸದಸ್ಯರು ಅಧ್ಯಕ್ಷರುಗಳ, ಸಭೆ ನಡೆಸಿ ಮತ ಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಶ್ರೀ ಲಕ್ಷ್ಮಣ್ ಸವದಿ, ಶಾಸಕರಾದ ಶ್ರೀ ಮಹೇಶ್ ಕುಮಟಳ್ಳಿ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೇಶ್ ನೇರ್ಲಿ, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಶ್ರೀ N B ಕೋಖಲೆ, ಮಂಡಲದ ಅಧ್ಯಕ್ಷರಾದ ಅಣ್ಣಾಸಾಹೇಬ್ ನಾಯಕ್ , ಬಿಜೆಪಿಯ ಯುವ ಧುರೀಣರಾದ ಚಿದಾನಂದ ಸವದಿ, ಶ್ರೀ ಗುರು ದುಶಾಳ, ಶ್ರೀ S A ಮುದಕಣ್ಣವರ್, ಶ್ರೀ ಶೈಲ ನಾಯಿಕ, ಶ್ರೀ A M ಖೊಬ್ರಿ, ಮುಂತಾದ ಬಿಜೆಪಿಯ ಮುಖಂಡರು ಕಾರ್ಯಕರ್ತರು ಹಾಜರಿದ್ದರು..