Belagavi News In Kannada | News Belgaum

ಚಳಿಗಾಲ ಅಧಿವೇಶನ ಕ್ಕೆ ರೈತರು‌ ಹೃದಯ ಪೂರ್ವಕ ಸ್ವಾಗತ

ಚಳಿಗಾಲ ಅಧಿವೇಶನದಲ್ಲಿ ಅನಾವಶ್ಯಕವಾಗಿ ದುಂದುವೆಚ್ಚಗಳನ್ನು ಮಾಡಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಬೆಳಗಾವಿ-30  ಡಿಸೆಂಬರ್ 13 ರಿಂದ 23 ರ ವರೆಗೆ ನಡೆಯಲ್ಲಿರುವ ಬೆಳಗಾವಿ ಚಳಿಗಾಲ ಅಧಿವೇಶನ ಕ್ಕೆ ರೈತರು‌ ಹೃದಯ ಪೂರ್ವಕ ಸ್ವಾಗತಿಸಿಕೊಳ್ಳುತ್ತಿದ್ದಾರೆ. ಚಳಿಗಾಲ ಅಧಿವೇಶನದಲ್ಲಿ ಅನಾವಶ್ಯಕವಾಗಿ ದುಂದುವೆಚ್ಚಗಳನ್ನು ಮಾಡಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ಹೇಳಿದರು.

 

ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 13 ರಂದು ನಡೆಯಲ್ಲಿರುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಚರ್ಚೆ,ರೈತರ ಪರ ಚರ್ಚೆ ಬೆಳೆಗಳ ಬಗ್ಗೆ ಕಬ್ಬಿಣ ಬಿಲ್ ಹಾಗೂ ಕಬ್ಬಿಣ ಬೆಲೆ ಎರಿಕೆಯ ಬಗ್ಗೆ ಚರ್ಚೆಯಾಗಬೇಕು ಎಂದು ಅವರು ಹೇಳಿದರು.

 

ಅಧಿವೇಶನದ ಹೆಸರಿನಲ್ಲಿ ರಾಜ್ಯದ ಎಲ್ಲ ರಾಜಕೀಯ ಜನಪ್ರತಿನಿಧಿಗಳು,ಶಾಸಕರುಗಳು,ಹಾಗೂ ಸರಕಾರಿ ಉನ್ನತ ಅಧಿಕಾರಿಗಳು ಸಂಪೂರ್ಣವಾಗಿ ದುಂದುವೆಚ್ಚವನ್ನು ನಿಲ್ಲಿಸಬೇಕು.ಅಧಿವೇಶನ ಮಾಡುವ ಅರ್ಥ ಖರ್ಚಿನಲ್ಲಿ ನೆರೆ ಹಾವಳಿ ಕೊವೀಡ್ ಸೋಂಕಿನಿಂದ ಆಘಾತಕ್ಕೆಗೊಳಗಾದ ಕುಟುಂಬಕ್ಕೆ ಪರಿಹಾರ ನೀಡಬೇಕು.

 

ಅದರಂತೆ ಬೆಳಗಾವಿ ಸುವರ್ಣ ಸೌಧದ ಸುತ್ತಮುತ್ತಲಿನ ಊರುಗಳಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿ ಅಭಿವೃದ್ಧಿಗಳಿಗೆ ಚಾಲನೆ ನೀಡುವಂತೆ ಆದೇಶವನ್ನು ಹೊರಡಿಸಬೇಕು,ಮತ್ತು ಗ್ರಾಮೀಣ ಪ್ರದೇಶಗಳ ಪರಿಸ್ಥಿಗಳನ್ನು ಆಲಿಸಬೇಕು. ಎಂದು ಮುಖ್ಯಮಂತ್ರಿಗಳಿಗೆ ಕರೆ ನೀಡದರು.‌ಈ ಸಂಧರ್ಭದಲ್ಲಿ ರೈತ ಸೇನೆ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ,ಜಯಶ್ರೀ ಗುರನ್ನವರ,ರಾಘವೇಂದ್ರ ನಾಯಿಕ,ಪ್ರಕಾಶ ನಾಯಿಕ ಹಾಗೂ ರೈತ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.