Belagavi News In Kannada | News Belgaum

ಗಡಿಭಾಗದ ಕಾಗವಾಡ ಚೆಕ್‍ಪೋಸ್ಟ್‍ಕ್ಕೆ ಎಸ್.ಪಿ. ಅಮರನಾಥ ರೆಡ್ಡಿ ಸೋಮವಾರ ದಿ. 29 ರಂದು ಭೇಟಿ

ಶೇಡಬಾಳ : ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಭಾಗದ ಕಾಗವಾಡ ಚೆಕ್‍ಪೋಸ್ಟ್‍ಕ್ಕೆ ಎಸ್.ಪಿ. ಅಮರನಾಥ ರೆಡ್ಡಿ ಸೋಮವಾರ ದಿ. 29 ರಂದು ಭೇಟಿ ನೀಡಿದರು.

ಆರ್‍ಟಿಪಿಸಿಆರ್ ಇಲ್ಲದೇ ರಾಜ್ಯ ಪ್ರವೇಶಕ್ಕೆ ಬಂದ ಬಸ್, ಕಾರು, ಬೈಕ್ ಸವಾರರನ್ನು ತಡೆದು ತಾವೇ ವಾಪಸ್ ಕಳುಹಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು 2 ಡೋಸ್ ಆಗಿದ್ದರು ಸಹ 72 ಘಂಟೆಯೊಳಗಿನ ಆರ್‍ಟಿಪಿಸಿಆರ್ ತೆಗೆದುಕೊಂಡು ಬಂದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶವಿದೆ. ನೆಗೆಟಿವ್ ವರದಿ ಇಲ್ಲದೇ ರಾಜ್ಯ ಪ್ರವೇಶಿಸುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

 

ಕೆಲವು ಸಮಯಗಳವರೆಗೆ ತಾವೇ ಖುದ್ದು ಚೆಕ್‍ಪೋಸ್ಟ್‍ನಲ್ಲಿ ನಿಂತು ಸೂಕ್ತ ದಾಖಲೆಗಳು ಇಲ್ಲದೇ ಬರುವ ವಾಹನಗಳನ್ನು ತಡೆದು ಮತ್ತೇ ವಾಪಸ್ ಕಳುಹಿಸಿದ ಘಟನೆ ಜರುಗಿತು.
ಈ ಸಮಯದಲ್ಲಿ ಅಥಣಿ ಸಿಪಿಆಯ್ ಶಂಕರಗೌಡ ಬಸಗೌಡರ, ಕಾಗವಾಡ ಪೋಲಿಸ್ ಸಿಬ್ಬಂದಿ ವರ್ಗದವರು, ಚೆಕ್ ಪೋಸ್ಟ್ ಅಧಿಕಾರಿಗಳು ಇದ್ದರು.