Belagavi News In Kannada | News Belgaum

ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್​ ಕಳಿಸಿದ ಶಿಕ್ಷಕ : ಶಾಲೆಗೆ ಬೀಗ್ ಜಡಿದು ಬಂಧನಕ್ಕೆ ಆಗ್ರಹಿಸಿದ ಗ್ರಾಮಸ್ಥರು

ಹಾವೇರಿ: ಶಾಲಾ ವಿದ್ಯಾರ್ಥಿನಿಗೆ  ಶಿಕ್ಷಕನೋರ್ವ ಕಿಸ್ ಕೋಡುವಂತೆ  ಪೀಡಿಸುತ್ತಿರುವ ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ.  ಶಿಕ್ಷಕನ ಕಾಮಚೇಷ್ಟೆಗೆ ಗ್ರಾಮಸ್ಥರು ಕಿಡಿಕಾರಿರುವ ಘಟನೆ  ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ಸಂಭವಿಸಿದೆ.

ದೇವರಗುಡ್ಡದ ಹೈಸ್ಕೂಲ್​ನ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ಕಳೆದ ವರ್ಷ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ವಿದ್ಯಾರ್ಥಿನಿಯ ಮೊಬೈಲ್​ ನಂಬರ್​ ಪಡೆದಿದ್ದ. ಆನ್​ಲೈನ್​ ಪಾಠ ಮಾಡುವ ನೆಪದಲ್ಲಿ ಪ್ರತಿನಿತ್ಯ ಚಾಟ್ ಮಾಡುತ್ತಿದ್ದ ಶಿಕ್ಷಕ, ಮಾತೆತ್ತಿದರೆ ನೀನು ಸುಂದರವಾಗಿದ್ದಿಯಾ,  ಕಿಸ್ ಕೊಡು ಎಂದು ಪೀಡಿಸುತ್ತಿದ್ದ. ಈತ ಮಾಡಿರುವ ಚಾಟಿಂಗ್​ನ ಸ್ಕ್ರೀನ್ ಶಾರ್ಟ್​ಗಳು ವಿದ್ಯಾರ್ಥಿನಿ ಸಹದ್ಯೋಗಿಗೆ ತೋರಿಸಿದ್ದು, ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನ್ನು ಬಂಧಿಸಬೇಕು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಆತನನ್ನು  ಕೆಲಸದಿಂದ ಅಮಾನತು ಮಾಡಬೇಕು.  ಎಂದು  ಬುಧವಾರ ಬೆಳಗ್ಗೆ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಶಾಲೆಗೆ ಬೀಗ ಜಡಿದು ಆಕ್ರೋಶ ಹೊರ ಹಾಕಿದ್ದಾರೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////