Belagavi News In Kannada | News Belgaum

ರಾಜ್ಯದಲ್ಲಿ 2 ಒಮಿಕ್ರಾನ್ ಕೇಸ್ ಪತ್ತೆ : ಕೇಂದ್ರ ಆರೋಗ್ಯ ಇಲಾಖೆಯಿಂದ ಸ್ಪೋಟಕ ಮಾಹಿತಿ

ಬೆಂಗಳೂರು : ಕೊರೊನಾ ವೈರಸ್ ರೂಪಾಂತರಿ ಒಮಿಕ್ರಾನ್  ಹೊಸ ವೈರಸ್ ರಾಜ್ಯಕ್ಕೂ ಕಾಲಿಟ್ಟಿದೆ. ಬೆಂಗಳೂರಿನ ಮೊದಲ ಎರಡು ಒಮಿಕ್ರಾನ್ ಕೇಸ್ ಪತ್ತೆಯಾಗಿವೆ.

ಕೋವಿಡ್​ ರೂಪಾಂತರಿ ತಳಿ ಒಮಿಕ್ರಾನ್​ B.1.1.529 ತಳಿಯ ಕೇಸ್​ಗಳು ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ ಅಗರವಾಲ್​​ ಮಾಹಿತಿ ನೀಡಿದ್ದಾರೆ.ಎರಡು ದಿನಗಳ ಹಿಂದೆ ಬೆಂಗಳೂರಿಗೆ ದಕ್ಷಿಣ ಆಫ್ರಿಕಾದದಿಂದ ಬಂದ ಇಬ್ಬರಿಗೆ ಒಮಿಕ್ರಾನ್​​ಸೋಂಕು ತಗುಲಿರುವುದು ಧೃಡಪಟ್ಟಿದೆ.

ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರಿಗೆ ಕ್ವಾರಂಟೈನ್​​ ಮಾಡಲಾಗಿದೆ. ಯಾರಿಗೂ ಹರಡದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿ ಎಂದು ಅಗರವಾಲ್ ತಿಳಿಸಿದ್ದಾರೆ. ದೇಶದಲ್ಲೇ ಮೊದಲು ಬೆಂಗಳೂರಿನಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿದೆ./////