Belagavi News In Kannada | News Belgaum

ಡಿ14ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೊರವಾಗಿ ಉತ್ತರ ಕೊಡ್ತಿ‌ನಿ. ಮಾಜಿ ಸಚಿವ ರಮೇಶ ಜಾರಕಿಹೊಳಿ

ಬಿಜೆಪಿಯ ದೆಹಲಿ ವರಿಷ್ಠರ ಆಶೀರ್ವಾದದಿಂದ ನಾನು ಜೀವಂತ ಇದ್ದೇನೆ, ಇಲ್ಲದಿದ್ರೆ ನನ್ನ ಮುಗಿಸುತ್ತಿದ್ರು ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ..ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲ್ಲಬೇಕು.ಜಿಲ್ಲೆಯ ಮೂಲೆ ಮೂಲೆಯಲ್ಲಿ ಪ್ರಚಾರ ಮಾಡುತ್ತಿದ್ದೇವೆ..

 

ನಿಮಗೆ ಬೇಕಿರೋ ಉತ್ತರ ಇಂದು ಸಿಗಲ್ಲ.ಪರಿಷತ್ ಫಲಿತಾಂಶ ದಿನ ಡಿ14ರಂದು ಡಿಕೆಶಿ ಪ್ರತಿ ಶಬ್ದಕ್ಕೆ ಉತ್ತರ ಸಿಗಲಿದೆ. ಅತ್ಯಂತ ಕಠೊರವಾಗಿ ಉತ್ತರ ಕೊಡ್ತಿ‌ನಿ.ನಾವು ಈಗ ಚುನಾವಣೆ ಮೂಡನಲ್ಲಿ ಇದ್ದೇವೆ. ಹತಾಶೆ ಮನೋಭಾವದಿಂದ ಡಿಕೆಶಿ ಟೀಕೆ ಮಾಡಿದ್ದಾರೆ.1985 ರಿಂದ ಇಲ್ಲಿಯ ವರೆಗೆ ನಡೆದ ಎಲ್ಲಾ ವಿಚಾರ ಬಹಿರಂಗ ಮಾಡ್ತಿನಿ

ನನ್ನ ವ್ಯಕ್ಯಿತ್ವ ಏನು, ಡಿಕೆಶಿ ವ್ಯಕ್ತಿತ್ವ ಏನು ಎಂದು ಹೇಳ್ತಿನಿ.ಒಪನ್ ವಾರ್ ಆಗಲಿ ಅಂದು.ಫಲಿತಾಂಶದ ದಿನ ಎಲ್ಲಕ್ಕೂ ಉತ್ತರ.ಡಿಕೆಶಿ ಕುಟುಂಬ, ಜಾರಕಿಹೊಳಿ ಕುಟುಂಬ ಎನಿತ್ತು ಎಲ್ಲಾ ಬಹಿರಂಗವಾಗಲಿ
ದೆಹಲಿ ವರಿಷ್ಠರ ಆಶೀರ್ವಾದ ನನ್ನ ಮೇಲೆ ಇದೆ. ದೆಹಲಿ ವರಿಷ್ಠರು ಇದ್ದಾರೆ ಎಂದು ನಾನು ಜೀವಂತ ಇದ್ದೇನೆ.

 

ಇಲ್ಲವೇ ಇಷ್ಟೊತ್ತಿಗೆ ನನ್ನ ವಿರುದ್ಧ ಷಡ್ಯಂತ್ರ ಮಾಡಿ ಮುಗಿಸಿ ಬಿಡುತ್ತಿದ್ರುಸಂಘ ಪರಿವಾರದ ನಾಯಕರ ಬೆಂಬಲದಿಂದ ನಾಯಕನಾಗಿದ್ದಾನೆ.ಬ್ಲ್ಯಾಕ್ ಮೇಲ್ ಯಾರು ಮಾಡ್ತಾರೆ ಎಂದು 14 ನೇ ತಾರೀಕು ಹೇಳಿತ್ತೇನೆ.

 

ಈಗ ಇದ್ದ ಎಂಎಲ್ಎ ಉಳಿಸಿಕೊಳ್ಳಲಿ ಆಮೇಲೆ ನೋಡೊಣ.14 ರಂದು ಡಿಕೆಶಿ, ಜಾರಕಿಹೊಳಿ ವಾರ್ ಆಗಲಿ ನೋಡೊಣ 2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವು ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ…