Belagavi News In Kannada | News Belgaum

ಸಭೆ ನಡೆಸಿ ಮತ ಯಾಚನೆ

ಬೆಳಗಾವಿ – ಚಿಕ್ಕೋಡಿ ಜಿಲ್ಲಾ ವಿಧಾನಪರಿಷತ್ ಚುನಾವಣೆಯ ಪ್ರಚಾರಾರ್ಥ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಉಗಾರ ಬುದ್ರುಕ ಹಾಗೂ ಮೋಳೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಾಗೂ ಸಿದ್ದೇವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಮತ ಯಾಚನ ಮಾಡಲಾಯಿತು ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು ಹಾಗೂ ವಿಧಾನಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿ, ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜೇಶ್ ನೇರ್ಲಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ವಿನಾಯಕ ಬಾಗಡಿ, ಪ್ರಧಾನ ಕಾರ್ಯದರ್ಶಿಗಳಾದ ನಿಂಗಪ್ಪ ಕೋಕಲೆ, ಮಂಡಲ್ ಅಧ್ಯಕ್ಷರಾದ ತಮ್ಮಣ್ಣ ಫಾರ್ಶೆಟ್ಟಿ, ಯುವ ಮುಖಂಡರಾದ ಶ್ರೀನಿವಾಸ್ ಪಾಟೀಲ್, ಶ್ರೀ ಅಣ್ಣಾಸಾಹೇಬ್ ಪಾಟೀಲ್, ಶ್ರೀ ಶಿವಾನಂದ್ ಪಾಟೀಲ,ವಕೀಲರಾದ ಅಭಯ್ ಅಕಿವಾಟೆ, ಯುವ ಮೋರ್ಚಾ ಅಧ್ಯಕ್ಷರಾದ ದೀಪಕ್ ಪಾಟೀಲ್ , ಶ್ರೀ ದಾದಾ ಗೌಡ ಪಾಟೀಲ್, ಮುಂತಾದ ಪ್ರಮುಖ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು…///