Belagavi News In Kannada | News Belgaum

ವಿಧಾನಪರಿಷತ್ ಚುನಾವಣೆಯ ಅಧಿಕೃತ ಅಭ್ಯರ್ಥಿಯಾಗಿರುವ ಮಹಾಂತೇಶ್ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ. ರಮೇಶ್ ಜಾರಕಿಹೊಳಿ ಮನವಿ

ಬೆಳಗಾವಿ: ಭಾರತೀಯ ಜನತಾ ಪಾರ್ಟಿಯಿಂದ ವಿಧಾನಪರಿಷತ್ ಚುನಾವಣೆಯ ಅಧಿಕೃತ ಅಭ್ಯರ್ಥಿಯಾಗಿರುವ ಮಹಾಂತೇಶ್ ಕವಟಗಿಮಠ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಗ್ರಾಮೀಣಾಭಿವೃದ್ಧಿಗೆ ಕೈಜೋಡಿಸಬೇಕೆಂದು ಮತದಾರರಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನವಿ ಮಾಡಿದರು


ಬೆಳಗಾವಿ ಗ್ರಾಮೀಣ ಮಂಡಲದ ಸಾಂಬ್ರಾ ಮತ್ತು ಸುಳೇಭಾವಿ ಮಹಾಶಕ್ತಿ ಕೇಂದ್ರಗಳ ಚುನಾಯಿತ ಪ್ರತಿನಿಧಿಗಳ ಹಾಗೂ ಪಕ್ಷದ ಮುಖಂಡರ ಸಭೆಯಲ್ಲಿ ಬುಧವಾರ ಮಾತನಾಡಿ ಕಳೆದ ಎರಡು ಅವಧಿಯಲ್ಲಿ ಗ್ರಾಮಪಂಚಾಯಿತಿಗಳ ಅಭಿವೃದ್ಧಿಗಳ ಚಿಂತನೆ ನಡೆಸಿರುವ ಮುತ್ತು ಅನುದಾನ ಕೊಡಿಸುವಲ್ಲಿ ಸತತ ಪ್ರಯತ್ನ ಮಾಡುವುದರೊಂದಿಗೆ ವಿಧಾನಪರಿಷತ್ತಿನಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಧ್ವನಿಯಾಗಿರುವ ಮಹಾಂತೇಶ್ ಕವಟಗಿಮಠ ಅವರನ್ನು ಹೆಚ್ಚಿನ ಮತದಿಂದ ಆಯ್ಕೆ ಮಾಡಬೇಕು ಈ ಬಾರಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು ಪದವೀಧರರು ಸ್ನಾತಕೋತ್ತರ ಪದವೀಧರರು ಆಯ್ಕೆಯಾಗಿದ್ದು ಅವರೆಲ್ಲರೂ ಅಭಿವೃದ್ಧಿಪರ ಬಿಜೆಪಿಗೆ ಮತ ನೀಡಲಿದ್ದು ಯಾವುದೇ ಆಮಿಷಗಳಿಗೆ ಒಳಗಾಗುವುದಿಲ್ಲ ಎಂದರು.

ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಭಾರತ ದೇಶ ವಿಶ್ವವಿಖ್ಯಾತ ವಾಗಿ ಬೆಳೆಯುತ್ತಿದೆ ಹಿಂದಿ ಕಾಣದಷ್ಟು ಅಭಿವೃದ್ಧಿಯತ್ತ ದೇಶ ಸಾಗುತ್ತಿರುವುದು ಅನೇಕ ಕಾನೂನುಗಳು ಅವಶ್ಯಕತೆ ರಾಜ್ಯಕ್ಕೆ ಮತ್ತು ದೇಶಕ್ಕೆ ಬೇಕಾಗುತ್ತದೆ ಇವುಗಳ ಅನುಷ್ಠಾನಕ್ಕೆ ರಾಜ್ಯದ ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ನೀಡುವ ಉದ್ದೇಶದಿಂದ ಈ ಬಾರಿಯೂ ಬೆಳಗಾವಿ ಜಿಲ್ಲೆಯಿಂದ ಅನುಭವಿ ಸರಳತೆಯ ರಾಜಕಾರಣಿ ಮಹಾಂತೇಶ ಕವಟಗಿಮಠ ಅವರನ್ನು ಆಯ್ಕೆ ಮಾಡುವ ಮೂಲಕ ಅಭಿವೃದ್ಧಿಗೆ ಶ್ರೀಕಾರ ಹಾಕಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರಲ್ಲಿ ವಿನಂತಿಸಿದರು.

ಜಿಲ್ಲಾ ಪ್ರಭಾರಿ ಶಶಿಕಾಂತ ನಾಯಿಕ, ಅಭ್ಯರ್ಥಿ ಮಹಾಂತೇಶ ಕವಟಗಿಮಠ, ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಾತನಾಡಿದರು.

ವೇದಿಕೆ ಮೇಲೆ
ರಾಜ್ಯ ಒ.ಬಿ.ಸಿ. ಮೋರ್ಚಾ ಕಾರ್ಯದರ್ಶಿ ಕೀರಣ ಜಾಧವ ಇದ್ದರು.
ಕಾರ್ಯಕ್ರಮದಲ್ಲಿ ಮಂಡಲ, ಮಹಾಶಕ್ತಿ ಕೇಂದ್ರಗಳ ಮುಖಂಡರು, ನೂರಾರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.