Belagavi News In Kannada | News Belgaum

ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥ ಳೀಯ ಮುಖಂಡರೊಂದಿಗೆ ಸಭೆ ನಡೆಸಿ ಮತ ಯಾಚನೆ

ಬೆಳಗಾವಿ – ಚಿಕ್ಕೋಡಿ ಜಿಲ್ಲಾ ವಿಧಾನ  ಪರಿಷತ್ ಚುನಾವಣೆಯ ಪ್ರಚಾರಾರ್ಥ ಹುಕ್ಕೇರಿ ಮತಕ್ಷೇತ್ರದ ವ್ಯಾಪ್ತಿಯ ಬೇಲ್ಲದ ಬಾಗೇವಾಡಿ, ಅಮ್ಮನಗಿ, ಘೋಡಗೆರಿ,ಕಣಗಲಾ, ಹೆಬ್ಬಾಳ,ಪಾಶ್ಚಪೂರ್,ಹತ್ತರಗಿ,ದಡ್ಡಿ, ಎಲಿಮುನ್ನೋಲಿ, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಹಾಗೂ ಹುಕ್ಕೆರಿ ಸಂಕೇಶ್ವರ್ ಪುರಸಭೆ ಸದಸ್ಯರು, ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಮತ ಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಡಿಸಿಸಿ ಬ್ಯಾಂಕ ಅಧ್ಯಕ್ಷರು ಹಾಗೂ ಮಾಜಿ ಸಂಸದರಾದ ಶ್ರೀ ರಮೇಶ ಕತ್ತಿ, ಮಾಜಿ ಸಚಿವರಾದ ಶ್ರೀ ಶಶಿಕಾಂತ್ ನಾಯಿಕ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರಾಜೇಶ್ ನೇರ್ಲಿ, ಮಂಡಲ್ ಅಧ್ಯಕ್ಷರಾದ ರಾಚಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಅಪ್ಪಾಜಿಗೊಳ್, ಶ್ರೀ ರಾಜೇಂದ್ರ ಮುನ್ನೊಳಿ, ಶ್ರೀ ಅಣ್ಣಪ್ಪ ಪಾಟೀಲ್ ಶ್ರೀ ಕಲಗೌಡ ಪಾಟೀಲ್, ಶ್ರೀ ಸುನಿಲ್ ಪರ್ವತರಾವ್, ಶ್ರೀ ಶಶಿಕಾಂತ್ ಮಠಪತಿ, ಶ್ರೀ ಬಸವರಾಜ ಕಲ್ಲಟ್ಟಿ, ಶ್ರೀ ಅಶೋಕ್ ಚಂದಪಗೊಳ, ಶ್ರೀ ರಾಯಪ್ಪ ಡೋಗ, ಶ್ರೀ ರವೀಂದ್ರ ಹಿಡಕಲ್, ಮುಂತಾದ ಪ್ರಮುಖ ಬಿಜೆಪಿ ಮುಖಂಡರು ಕಾರ್ಯಕರ್ತರು ಹಾಜರಿದ್ದರು…